Breaking News

ಜಿಟಿ ಜಿಟಿ ಮಳೆ ನಡುವೆ..ಧ್ವಜಾರೋಹಣ ನೆರವೇರಿಸಿದ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ..!!  

Spread the love

ಜಿಟಿ ಜಿಟಿ ಮಳೆ ನಡುವೆ..ಧ್ವಜಾರೋಹಣ ನೆರವೇರಿಸಿದ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ..!!

 

 

 

 

 

 

 

ಯುವ ಭಾರತ ಸುದ್ದಿ  ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಿದರು, ಜಿಟಿ ಜಿಟಿ ಮಳೆ ನಡುವೆಯೂ ಸರಳವಾಗಿ ಸಮಾರಂಭ ಆಚರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಇಲ್ಲದೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಮಾತ್ರ ಭಾಗಿಯಾಗಿದ್ದರು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ:

ಇದೇ ವೇಳೆ ಇಲಾಖೆಯ ವಸತಿ ನಿಲಯಗಳಲ್ಲಿ ಕಲಿತು ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿ ಸ್ನೇಹಾ ಮಹಾದೇವ ಕಟಗೆನ್ನವರ (99.36%), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ಸತ್ಯನಾರಾಯಣ ಅಶೋಕ ಖಂಡ್ರಟ್ಟಿ (99.36%), ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿ ಅಕ್ಷತಾ ವಿಠ್ಠಲ ದುರ್ಗನ್ನವರ (97.44%), ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ಸಮ್ಮದ ಬಾಪುಸಾಬ ಭಾಲ್ದಾರ (94.88%) ಇವರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಗಣ್ಯರು ಹಾಗೂ ಅಧಿಕಾರಗಳು ಸೇರಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.

ರಾಜ್ಯ ಸಭಾ ಸದ್ಯಸರಾದ ಈರಣ್ಣಾ ಕಡಾಡಿ, ವಿಧಾನ ಪರಿಷತ್ ಡಾ. ಸಾಬಣ್ಣ ತಳವಾರ, ನಗರ ಶಾಸಕರಾದ ಅಭಯ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಐಜಿಪಿ ರಾಘವೇಂದ್ರ ಸುಹಾಸ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್.ವಿ, ಪೊಲೀಸ್ ಆಯುಕ್ತರಾದ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟ್ಪಿ, ನಗರಾಭಿವೃದಿ ಆಯುಕ್ತ ಪ್ರೀತಮ ನಸಲಾಪುರ, ತಹಶೀಲ್ದಾರ ಆರ್.ಕೆ.ಕುಲಕರ್ಣಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆಕರ್ಷಕ ಪಥಸಂಚಲನ:
ಕವಾಯತ ಕಮಾಂಡರ್ ಪ್ರೋ.ಆರ್.ಪಿ.ಐ. ಡಿ.ಆರ್ ಶಿವಾನಂದ ಜೀವರಗಿ ಹಾಗೂ ಆರ್‍ಎಸ್‍ಐ ಡಿ.ಎ.ಆರ್ ಸಹಾಯಕ ಕವಾಯತ ಕಮಾಂಡರ್ ವಿಠ್ಠಲ ಕೊಕಟನೂರ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ಕೆಎಸ್‍ಆರ್‍ಪಿ, ಸಶಸ್ತ್ರ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಕರ್ನಾಟಕ ಅಗ್ನಿ ಶಾಮಕದಳ, ಜಿಲ್ಲಾ ಅಬಕಾರಿ ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ ಹಾಗೂ ಪೊಲೀಸ್ ಬ್ಯಾಂಡ್ ತಂಡದವರು ಪಥಸಂಚಲನ ನಡೆಸಿಕೊಟ್ಟರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

17 − eleven =