ಅಕ್ರಮ ಒತ್ತುವರಿಯನ್ನು ಆದಷ್ಟು ಬೇಗ ಸರ್ವೇ
ಮಾಡಲಾಗುವುದು-ಸಚಿವ ರಮೇಶ್ ಜಾರಕಿಹೊಳಿ.!

ಯುವ ಭಾರತ ಸುದ್ದಿ ಬೆಳಗಾವಿ: ಮಲಪ್ರಭಾ ನದಿಪಾತ್ರದಲ್ಲಿ ಆಗಿರುವ ಅಕ್ರಮ ಒತ್ತುವರಿಯನ್ನು ಆದಷ್ಟು ಬೇಗ ಸರ್ವೇ ಮಾಡಲಾಗುವುದು. ಅದಕ್ಕಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸರ್ವೆ ಕಾರ್ಯ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ಮತ್ತು ಆಲಮಟ್ಟಿಯಲ್ಲಿ ಸಿಎಂ ಅವರು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆರೆ ಪರಿಹಾರ ಕುರಿತು ಮತ್ತೊಮ್ಮೆ ಸಭೆ ಮಾಡಿ ಜಿಲ್ಲಾವಾರು ಪರಿಹಾರ ನೀಡಲು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕೃಷ್ಣ ನದಿ ಪಾತ್ರದಲ್ಲಿ ಮಳೆಯಿಂದಾಗಿ ಹಾನಿಯಾಗಿದೆ ಆದರೆ ಈ ಬಾರಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಣಾಮವಾಗಿ ಪ್ರವಾಹದಿಂದ ಹಾನಿಯಾಗಿಲ್ಲ. ಐದು ಜಿಲ್ಲೆಗಳಿಗ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡಲಾಗುತ್ತದೆ ಎಂದು ಸಚಿವರು ಹೇಳಿದರು.
ನಾಳೆ ರಾಮದುರ್ಗದಲ್ಲಿ ಧರಣಿನಿರತ ನೆರೆ ಸಂತ್ರಸ್ತರ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ 30 ಗ್ರಾಮಗಳ ಸ್ಥಳಾಂತರ ಕುರಿತು ಪರಿಶೀಲನೆ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
YuvaBharataha Latest Kannada News