Breaking News

ಸಂಪುಟ ವಿಸ್ತರಣೆ ; ಮುಖ್ಯಮಂತ್ರಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ – ಸಚಿವ ರಮೇಶ್ ಜಾರಕಿಹೊಳಿ..!!

Spread the love

ಸಂಪುಟ ವಿಸ್ತರಣೆ ; ಮುಖ್ಯಮಂತ್ರಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ – ಸಚಿವ ರಮೇಶ್ ಜಾರಕಿಹೊಳಿ..!!

 

ಯುವ ಭಾರತ ಸುದ್ದಿ,

ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ.

ಹೊಸ ಮುಖಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಸಂಪುಟದ ಕೆಲವು ಮಂತ್ರಿಗಳನ್ನು, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಸಚಿವರನ್ನು ಕೈಬಿಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಜಿಲ್ಲೆಯ ಯಾವುದೇ ಸಚಿವರ ಕೈಬಿಟ್ಟರೂ ಕೂಡ ಇದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಪಕ್ಷದ ನಾಯಕತ್ವ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ಸಂಭವಿಸಲಿರುವ ಬಿರುಕುಗಳನ್ನು ತಪ್ಪಿಸಲು ಪಕ್ಷದ ನಾಯಕತ್ವವು ಈ ಬಾರಿ ಕೆಲ ನಾಯಕರಿಗೆ ಅವಕಾಶ ಕಲ್ಪಿಸಲು ಪಕ್ಷದ ನಾಯಕತ್ವ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಜಾರಕಿಹೊಳಿಯವರು ಹೇಳಿದ್ದಾರೆ.


Spread the love

About Yuva Bharatha

Check Also

ಶ್ರೀ ಗುರು ಮಹಾದೇವ ಅಜ್ಜನವರ ಜಯಂತಿ ಉತ್ಸವವು!

Spread the loveಶ್ರೀ ಗುರು ಮಹಾದೇವ ಅಜ್ಜನವರ ಜಯಂತಿ ಉತ್ಸವವು! ಗೋಕಾಕ: ಶ್ರೀ ಗುರು ಮಹಾದೇವ ಆಶ್ರಮ ಕಪರಟ್ಟಿ, ಕಳ್ಳಿಗುದ್ದಿ, …

Leave a Reply

Your email address will not be published. Required fields are marked *

seven + 7 =