ಭವಾನಿಗೆ ಬಿಜೆಪಿಯಿಂದ ಆಫರ್ ! ಕ್ಷೇತ್ರ ಯಾವುದು ಗೊತ್ತಾ ?

ಯುವ ಭಾರತ ಸುದ್ದಿ ಚಿಕ್ಕಮಗಳೂರು:
ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಿಕೆಟ್ ನಿರಾಕರಿಸಿದ್ದಾರೆ. ಈ ಮಧ್ಯೆ ಭವಾನಿ ರೇವಣ್ಣಗೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದೆ.
ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.
ರವಿ ಅವರು, ಭವಾನಿ ರೇವಣ್ಣ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಹೊಳೆನರಸಿಪುರದಿಂದ ಭವಾನಿ ಅಕ್ಕ ಬಿಜೆಪಿ ಅಭ್ಯರ್ಥಿಯಾಗಲಿ ಎಂಬುದು ನನ್ನ ಮನಸ್ಸಿನಲ್ಲಿ ಇತ್ತು. ಆದರೆ ಮನೆಯಲ್ಲಿ ಗಲಾಟೆ ಹಚ್ಚಿಸುವ ಕೆಲಸ ಬಯಸಲ್ಲ ಎಂದು ಹೇಳಿದರು.
ಹೊಳೆನರಸಿಪುರದಲ್ಲಿ ಭವಾನಿ ಅಕ್ಕನಿಗಿಂತ ಉತ್ತಮ ಕ್ಯಾಂಡಿಡೇಟ್ ಬೇರೊಬ್ಬರಿಲ್ಲ. ಹಾಗಾಗಿ ಬಿಜೆಪಿಯಿಂದ ಸ್ಪರ್ಧಿಸಲಿ ಎಂಬುದು ನನ್ನ ಮನಸ್ಸಿನಲ್ಲಿದೆ. ಆದರೆ ನಾನ್ಯಾಕೆ ರೇವಣ್ಣ ಹಾಗೂ ಭವಾನಿ ಅಕ್ಕನ ನಡುವೆ ಜಗಳ ಹಚ್ಚುವುದು ಎಂದು ಸುಮ್ಮನಿದ್ದೆ. ಹಾಗಾಗಿ ಈ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳುತ್ತಲೇ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ್ದಾರೆ.
YuvaBharataha Latest Kannada News