ಹೆಬ್ಬಾಳ್ಕರ್ ಅಳಿಯನಿಗೆ ಕಾಂಗ್ರೆಸಿನಿಂದ ಬಿಗ್ ಶಾಕ್ !

ಯುವ ಭಾರತ ಸುದ್ದಿ ಬೆಂಗಳೂರು :
ಮಾಜಿ ಮುಖ್ಯಮಂತ್ರಿ ಜಗದೀಶ
ಶೆಟ್ಟರ ಅವರ ಜೊತೆ ಸೆಂಟ್ರಲ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ರಜತ ಉಳ್ಳಾಗಡ್ಡಿಮಠ ಅವರನ್ನು ಬೆಂಗಳೂರಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಹಾಗಾಗಿ ರಜತ ಉಳ್ಳಾಗಡ್ಡಿಮಠ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಕಾಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ
ಜಗದೀಶ ಶೆಟ್ಟರ ಅವರಿಗೆ ಸ್ಪರ್ಧೆಯೊಡಲು ರಜತ ಅವರು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ಇದೀಗ ಅವರು ಈ ಕ್ಷೇತ್ರವನ್ನು ಶೆಟ್ಟರ ಅವರಿಗೆ ಬಿಟ್ಟು ಕೊಡಬೇಕಾದ ಪ್ರಸಂಗ ಬರಬಹುದು.
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ ಉಳ್ಳಾಗಡ್ಡಿಮಠವರಿಗೆ ಕಾಂಗ್ರೆಸ್ ಪಕ್ಷ ಬಿಗ್ ಶಾಕ್ ನೀಡಿದಂತಾಗಿದೆ.
YuvaBharataha Latest Kannada News