ಜನ್ಮದಿನ ನೆಪ : ಪ್ರಧಾನಿ ಮೋದಿ ಭೇಟಿ ಮಾಡಿ ಗಡಿ ತಂಟೆ ಬಗೆಹರಿಸಿ ಎಂದ ಮಹಾ ಸಂಸದ
ಯುವ ಭಾರತ ಸುದ್ದಿ ದೆಹಲಿ : ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಹಾತಕಣಂಗಲೆ ಸಂಸದ ಧೈರ್ಯಶೀಲ ಮಾನೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗಡಿತಂಟೆ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಶುಕ್ರವಾರ ಧೈರ್ಯಶೀಲ ಮಾನೆ ಅವರ ಜನ್ಮದಿನಾಚರಣೆ ಇದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮೋದಿ ಅವರು ಧೈರ್ಯಶೀಲ ಮಾನೆ ಅವರಿಗೆ ಜನ್ಮದಿಂದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಜೋತಿಬಾ ದೇವಿಯ ಮೂರ್ತಿಯನ್ನು ಪ್ರಧಾನಿಯವರಿಗೆ ಅವರು ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಧೈರ್ಯ ಶೀಲ ಮಾನೆ ಅವರು, ಬೊಮ್ಮಾಯಿ ಬಗ್ಗೆ ಮೋದಿ ಅವರಲ್ಲಿ ದೂರಿದ್ದಾರೆ. ಬೊಮ್ಮಾಯಿ ಅವರು ಇತ್ತೀಚಿಗೆ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕುರಿತು ನೀಡುತ್ತಿರುವ ಹೇಳಿಕೆಯಿಂದ ಉಭಯ ರಾಜ್ಯಗಳಲ್ಲಿ ಶಾಂತಿ ಕುಸಿದು ಹೋಗುವಂತಾಗಿದೆ ಎಂದು ಧೈರ್ಯ ಶೀಲ ಮಾನೆ ಟೀಕಿಸಿದರು.
ಗಡಿ ವಿಷಯವಾಗಿ ಗ್ರಹ ಸಚಿವ ಆಮಿತ್ ಶಾ ಅವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಗ್ರಹ ಸಚಿವರು ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಆಕ್ಷೇಪಿಸಿದರು. ಬೊಮ್ಮಾಯಿ ಸರಕಾರ ಗಡಿಭಾಗದ ಮರಾಠಿಗರ ಮೇಲೆ ನಿರಂಕುಶವಾದಿ ಧೋರಣೆ ಅನುಸರಿಸುತ್ತಿದೆ. ಅವರು ಅನುಸರಿಸುತ್ತಿರುವ ನೀತಿಯಿಂದ ಗಡಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ಪ್ರಶ್ನೆ ಉದ್ಭವಿಸಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಅವರಿಗೆ ಖಡಕ್ ಆಗಿ ನಿರ್ದೇಶನ ನೀಡುವಂತೆ ತಿಳಿಸಿದರು. ಗಡಿಭಾಗದ ಮರಾಠಿಗರ ಭಾವನೆ-ಅನುಭವಿಸುವ ಸಮಸ್ಯೆಗಳ ಕುರಿತ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದರು.