ವರ್ಷಾಂತ್ಯಕ್ಕೆ ವಿಧಾನಸಭೆ ಚುನಾಚಣೆ ನಡೆಯುವ 4 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ
ನವದೆಹಲಿ:
ಶುಕ್ರವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವರ್ಷಾಂತ್ಯದೊಳಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ಈ ನಾಲ್ಕು ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ.
2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಂಜಾಬ್, ತೆಲಂಗಾಣ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥರನ್ನು ನೇಮಕ ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಬಿಜೆಪಿಯ ರಾಜಸ್ಥಾನ ಚುನಾವಣಾ ಉಸ್ತುವಾರಿಯಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ನೇಮಕಗೊಂಡಿದ್ದು, ಗುಜರಾತ್ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ. ಓಂ ಮಾಥುರ್ ಅವರನ್ನು ಬಿಜೆಪಿಯು ಪಕ್ಷದ ಛತ್ತೀಸ್‌ಗಢ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ.
ನಾಲ್ಕು ರಾಜ್ಯಗಳಿಗೆ ನೇಮಕಗೊಂಡ ಚುನಾವಣಾ ಉಸ್ತುವಾರಿಗಳು
ರಾಜಸ್ಥಾನ
ಪ್ರಹ್ಲಾದ ಜೋಶಿ – ಚುನಾವಣಾ ಉಸ್ತುವಾರಿ
ನಿತಿನ್ ಪಟೇಲ್ – ಉಸ್ತುವಾರಿ
ಕುಲದೀಪ ಬಿಷ್ಣೋಯ್ – ಸಹ-ಉಸ್ತುವಾರಿ
ಛತ್ತೀಸ್‌ಗಢ
ಓಂ ಪ್ರಕಾಶ ಮಾಥೂರ – ಚುನಾವಣಾ ಉಸ್ತುವಾರಿ
ಮನ್ಸುಖ್ ಮಾಂಡವಿಯಾ – ಸಹ-ಉಸ್ತುವಾರಿ
ತೆಲಂಗಾಣ
ಪ್ರಕಾಶ ಜಾವಡೇಕರ – ಚುನಾವಣಾ ಉಸ್ತುವಾರಿ
ಸುನಿಲ ಬನ್ಸಾಲ್ – ಸಹ ಉಸ್ತುವಾರಿ
ಮಧ್ಯಪ್ರದೇಶ
ಭೂಪೇಂದ್ರ ಯಾದವ್ – ಚುನಾವಣಾ ಉಸ್ತುವಾರಿ
ಅಶ್ವಿನಿ ವೈಷ್ಣವ – ಸಹ-ಉಸ್ತುವಾರಿ