ಚುನಾವಣೆ ಸೇರಿ ಬೇರೆ ಬೇರೆ ಕಾರಣಗಳಿಂದ ರಮೇಶ ಜಾರಕಿಹೊಳಿ ಮಂತ್ರಯಾಗಲು ವಿಳಂಭವಾಗಿದೆ-ನಳಿನಕುಮಾರ ಕಟೀಲ.!

ಗೋಕಾಕ: ರಮೇಶ ಜಾರಕಿಹೊಳಿ ಅವರನ್ನು ಸಚಿವರಾಗುತ್ತಾರೆ. ಚುನಾವಣೆ ಸೇರಿ ಬೇರೆ ಬೇರೆ ಕಾರಣಗಳಿಂದ ವಿಳಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.
ಅವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ ನಾವು ಒಂದಾಗಿದ್ದೆವೆ. ಪಕ್ಷ ಹಾಗೂ ಸರಕಾರ ಮಟ್ಟದಲ್ಲಿ ಚರ್ಚೆಯಾಗಿದೆ. ಕೆಲವು ಚುನಾವಣೆ ಸೇರಿ ಬೇರೆ ಬೇರೆ ಕಾರಣದಿಂದ ಮಂತ್ರಿ ಸ್ಥಾನ ನೀಡುವದು ತಡವಾಗಿದೆ, ರಮೇಶ ಜಾರಕಿಹೊಳಿ ಮಂತ್ರಿ ಸ್ಥಾನದ ಕುರಿತು ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ಎಲ್ಲರೂ ಜೊತೆಯಾಗಿದ್ದೆವೆ ಎಂದು ಸ್ಪಷ್ಟಪಡಿಸಿದರು.
ಪದವಿದರ ಕ್ಷೇತ್ರದ ಹೆಚ್ಚಿನ ಮತಗಳಿವೆ ಹೀಗಾಗಿ ಶಿಕ್ಷಕರ ಕ್ಷೇತ್ರದಿಂದ ಸ್ಫರ್ಧಿಸಿದ ಅರುಣ ಶಹಾಪೂರ ೧೫ಸಾವಿರ ಅಂತರ ಪಡೆದುಕೊಳ್ಳಲಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ. ಅರುಣ ಶಹಾಪೂರ ಗೆದ್ದೆ ಗೆಲ್ಲುತ್ತಾರೆ. ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೇಸ್ ರಾಜಕಾರಣ ಮಾಡಬಾರದು. ಈ ಮೊದಲು ಸಿದ್ಧರಾಮಯ್ಯನವರು ಇದ್ದಾಗ ಯಾವ ಯಾವ ಪಾಠ ಮತ್ತು ಏನೇನು ಸೇರಿಸಿದ್ದರು ಎಂಬುದು ಗೊತ್ತಿದೆ ಬಿಜೆಪಿ ಸಮೀತಿ ರಚನೆ ಮಾಡಿದೆ ಇತಿಹಾಸ ತಿರುಚುವ ಕೇಲಸ ಬಿಜೆಪಿ ಮಾಡಲ್ಲ ಎಂದು ಕಾಂಗ್ರೇಸ್‌ಗೆ ಟಾಂಗ್ ನೀಡಿದರು.
YuvaBharataha Latest Kannada News