ರಮೇಶ ಜಾರಕಿಹೊಳಿ ಮೇಲೆ ಯಾವುದೇ ಅನುಮಾನ ಬೇಡ: ಬಾಲಚಂದ್ರ ಸಾಹುಕಾರ್
ಯುವ ಭಾರತ ಸುದ್ದಿ ಬೆಳಗಾವಿ: ಮಾಧ್ಯಮಗಳಲ್ಲಿ ರಮೇಶ ಜಾರಕಿಹೊಳಿ ಬಗ್ಗೆ ವಿವಿಧ ರೀತಿ ಸುದ್ಧಿಗಳು ಬರುತ್ತಿವೆ. ರಮೇಶ ಜಾರಕಿಹೊಳಿ ಇಲ್ಲಿರುವವರಿಗೆ ಯಾವುದೇ ಅನುಮಾನ ಬೇಡ. ಬಿಜೆಪಿ ಗೆಲ್ಲಿಸುವುದು, ಕಾಂಗ್ರೆಸ್ ಸೋಲಿಸುವುದೇ ನಮ್ಮಗುರಿ ಎಂದುಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಎದುರು ಮನದಿಂಗಿತ ವ್ಯಕ್ತಪಡಿಸಿದರು.
ಬೆಳಗಾವಿ ಸಮೀಪದ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು, ಎರಡು ದಿನ ಮಾತ್ರ ಬಾಕಿ ಉಳಿದಿದೆ, ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ನೀಡಿ ಸ್ವಂತ ಸಹೋದರನ್ನನ್ನೇ ಸೋಲಿಸಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಗೆಲುವಿಗೆ ಕಾರಣರಾಗಿದ್ದಾರೆ. ಹೀಗಾಗಿ ಇಲ್ಲಿರುವ ಯಾರೂ ರಮೇಶ ಜಾರಕಿಹೋಳಿ ಬಗ್ಗೆ ಯಾರೂ ಅನುಮಾನಪಡುವ ಅಗತ್ಯವಿಲ್ಲ ಎಂದು ರಮೇಶ ಜಾರಕಿಹೋಳಿ ಪರ ಬಾಲಚಂದ್ರ ಜಾರಕಿಹೋಳಿ ಬ್ಯಾಟಿಂಗ್ ಮಾಡಿದರು.
YuvaBharataha Latest Kannada News
