ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನ- ಬಾಲಚಂದ್ರ ಜಾರಕಿಹೋಳಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ.!!
ಯುವ ಭಾರತ ಸುದ್ದಿ ಗೋಕಾಕ್ : ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ. ಘಟಪ್ರಭಾ ನದಿ ನೀರು ಗ್ರಾಮವನ್ನು ಸುತ್ತುವರೆದು ರಸ್ತೆ ಸಂಪರ್ಕ ಕಡಿತಗೊಂಡಿದೆ.ಪ್ರವಾಹಕ್ಕೆ ಹೆದರಿ ನಿನ್ನೆ ರಾತ್ರಿಯೇ ಜನ ಗ್ರಾಮ ಖಾಲಿ ಮಾಡಿದ್ದಾರೆ. ಉಳಿದ ಜನರು ಒಬ್ಬಬ್ಬರಾಗಿ ತಮ್ಮ ವಸ್ತುಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಇನ್ನೂ ಈ ಗ್ರಾಮದ ಜನರಿಗೆ ಶಾಸಕ ಬಾಲಚಂದ್ರ ಜಾರಕಿಹೋಳಿ ಊಟದ ವ್ಯವಸ್ಥೆ ಮಾಡಿದ್ದಾರೆ.ಅಷ್ಟೇ ಅಲ್ಲ ನಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದಾರೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.
ರಸ್ತೆಯಲ್ಲಿಯೇ ಠಿಕಾಣಿ:
ಚಿಗಡೊಳ್ಳಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಗ್ರಾಮ ಹೊರಗಡೆ ಬಂದಿರುವ ಸಂತ್ರಸ್ಥರು ತಮ್ಮೂರಿಗೆ ಹೋಗುವ ರಸ್ತೆಯಲ್ಲಿ ಠಿಕಾಣೆ ಹೂಡಿದ್ದಾರೆ. ತಮ್ಮೊಂದಿಗೆ ಎತ್ತು, ಹಸು, ಕೋಳಿ,ಆಡುಗಳನ್ನ ತೆಗೆದುಕೊಂಡು ಬಂದಿದ್ದಾರೆ. ಟ್ಯಾಕ್ಟರ್ ಕೆಳಗಡೆ ಗ್ಯಾಸ ಹೊತ್ತಿಸಿ ಊಟ ತಯಾರಿಸುತ್ತಿದ್ದಾರೆ.
ನಡುಗಡ್ಡೆಯಾದ ಅಡಿಬಟ್ಟಿ ಗ್ರಾಮ: ಟಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಅಡಿಬಟ್ಟಿ ಗ್ರಾಮವೂ ಸಹ ನಡುಗಡ್ಡೆಯಾಗಿದೆ.ನದಿ ನೀರು ನಾಲ್ಕು ದಿಕ್ಕಿನಲ್ಲಿ ಸುತ್ತುವರೆದಿರುವುದರಿಂದ ಗ್ರಾಮ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ನದಿ ನೀರು ಗ್ರಾಮ ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಇಲ್ಲಿನ ಜನರನ್ನ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.