Breaking News

ವಾರಕ್ಕೆ ಅರ್ಧ ಗಂಟೆ ಮೊಬೈಲ್ ನಲ್ಲಿ ಮಾತನಾಡಿದರೆ ಬಿಪಿ ಹೆಚ್ಚಳ..!

Spread the love

ವಾರಕ್ಕೆ ಅರ್ಧ ಗಂಟೆ ಮೊಬೈಲ್ ನಲ್ಲಿ ಮಾತನಾಡಿದರೆ ಬಿಪಿ ಹೆಚ್ಚಳ..!

ಯುವ ಭಾರತ ಸುದ್ದಿ ನವದೆಹಲಿ :
ವಾರದಲ್ಲಿ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಮೊಬೈಲ್ ಫೋನಿನಲ್ಲಿ ಮಾತನಾಡಿದರೆ ರಕ್ತದೊತ್ತಡ ಅಪಾಯ ಶೇಕಡಾ 12ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಸಂವಹನಕ್ಕೆ ಮೊಬೈಲ್ ಅನಿವಾರ್ಯ. ಆದರೆ, ಈ ವರದಿ ಜನರನ್ನು ಒಳಗಾಗುವಂತೆ ಮಾ ಆತಂಕಕ್ಕೊಳಗಾಗುವಂತೆ ಮಾಡಿದೆ.

ಅಧಿಕ ರಕ್ತದ ಒತ್ತಡ ಇಲ್ಲದ 2,12,046 ಜನರನ್ನು ಬಳಸಿಕೊಂಡು ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯ ಈ ಸಂಶೋಧನ ನಡೆಸಿದೆ. ವಾರದಲ್ಲಿ 30 ನಿಮಿಷಕ್ಕಿಂತ ಕಡಿಮೆ ಮೊಬೈಲ್ ಮಾತನಾಡದವರಿಗಿಂತ ಮಾತನಾಡುವವರಲ್ಲಿ ಬಿಪಿ ಸಮಸ್ಯೆ ಕಾಣಿಸಿಕೊಂಡಿದೆ. ಅಧಿಕಾರ ರಕ್ತದೊತ್ತಡ, ಹೃದಯಘಾತ ಮತ್ತು ಪಾರ್ಶ್ವವಾಯು ಸಂಭವಿಸಲು ಮೊಬೈಲ್ ನಲ್ಲಿ ಮಾತನಾಡುವುದು ಪ್ರಮುಖ ಕಾರಣವಾಗಿದ್ದು ಜಾಗತಿಕವಾಗಿ ಜನರ ಅಕಾಲಿಕ ಮರಣಕ್ಕೆ ಕಾರಣವಾಗಿದೆ.

ಪ್ರಪಂಚದ ಜನಸಂಖ್ಯೆಯಲ್ಲಿ 10 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನ ಮೊಬೈಲ್ ಫೋನ್ ಹೊಂದಿದ್ದಾರೆ. ಮೊಬೈಲ್ ಫೋನ್ ಕಡಿಮೆ ಮಟ್ಟದ ರೇಡಿಯೋ ಫ್ರೀಕ್ವೆನ್ಸಿ ಶಕ್ತಿಯನ್ನು ಹೊರಸೂಸುತ್ತದೆ. ಕೆಲ ಸಮಯದ ನಿರಂತರ ಮೊಬೈಲ್ ಬಳಕೆ ರಕ್ತದೊತ್ತಡ ಸಮಸ್ಯೆ ಉಂಟುಮಾಡುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 + seven =