ಶೈಕ್ಷಣಿಕ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸಿಕೊಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಕಾರ್ಯ ಶ್ಲಾಘನೀಯವಾಗಿದೆ- ಅಜೀತ ಮನ್ನಿಕೇರಿ!!

ಯುವ ಭಾರತ ಸುದ್ದಿ ಬೆಟಗೇರಿ:ಸಮೀಪದ ನಿಂಗಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲ್ಲಿ ನಬಾರ್ಡ ಆರ್‌ಐಡಿಎಫ್ ೨೫ರ ಯೋಜನೆಯಡಿಯಲ್ಲಿ ಸುಮಾರು ೨೨ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಎರಡು ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಫೆ.೨೩ರಂದು ನಡೆಯಿತು.
ಮೂಡಲಗಿ ವಲಯದ ಬಿಇಒ ಅಜೀತ ಮನ್ನಿಕೇರಿ ಮುಖ್ಯಅತಿಥಿಗಳಾಗಿ ಮಾತನಾಡಿ, ನಿಂಗಾಪೂರ ಗ್ರಾಮಕ್ಕೆ ಶೈಕ್ಷಣಿಕ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಮುಖ್ಯ ಶಿಕ್ಷಕ ಎಸ್.ವೈ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೆಟಗೇರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಹಾಗೂ ಗಣ್ಯರನ್ನು ಶಾಲೆಯ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು.
ಬೆಟಗೇರಿ ಸಿಆರ್‌ಸಿ ಬಿ.ಟಿ.ಪುಂಜಿ, ಶಿವಾನಂದ ಮಾಡಮಗೇರಿ, ವಿಠಲ ಕೌಜಲಗಿ, ಲಕ್ಷö್ಮಣ ಅರಬನ್ನವರ, ಮಾರುತಿ ಬಡಿಗೇರ, ಪರಗೌಡ ಪಾಟೀಲ, ಬಸವರಾಜ ಮಾಡಮಗೇರಿ, ಬಸಪ್ಪ ದೇವಋಷಿ, ಎಂ.ಎಲ್.ವಗ್ಗರ, ವೈ.ಸಿ.ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಬಿ.ಎ.ಕೋಟಿ, ಬಿ.ಎಸ್.ಮುಂಡಗಿನಾಳ, ಜಿ.ಎನ್.ಕಂಬಳಿ, ಕೆ.ಕೆ.ಬುರಗೊಂಡಿ, ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು, ಎಸ್‌ಡಿಎಮ್‌ಸಿ ಸದಸ್ಯರು, ಸ್ಥಳೀಯರು ಇದ್ದರು.
YuvaBharataha Latest Kannada News