ಶಾಲಾ ಮಕ್ಕಳ ಅಹಾರದಲ್ಲಿ ಸಿರಿಧಾನ್ಯ ಬಳಸಲು ಸೂಚನೆ ದೆಹಲಿ: ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಗ್ಗೆ ಅರಿವು ಹಾಗೂ ಅದರ ಮಹತ್ವ ತಿಳಿಯಲು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಊಟದಲ್ಲಿ ಸಿರಿಧಾನ್ಯ ಬಳಸುವಂತೆ ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ. ವಿಶ್ವಸಂಸ್ಥೆಯು 2023 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆ ಮಕ್ಕಳಿಗೆ ಪೌಷ್ಠಿಕ ಆಹಾರದ ಕುರಿತು ಜಾಗೃತಿ ಮೂಡಿಸಲು ಸರ್ಕಾರವು ಈ ಉಪಕ್ರಮವನ್ನು …
Read More »ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ
ಶ್ರೀಕ್ಷೇತ್ರ ಸೊಗಲಕ್ಕೆ ತೆರಳುವ ಹದಗೆಟ್ಟ ಮುಖ್ಯ ರಸ್ತೆ ಮುರಗೋಡ: ಮುರಗೋಡ ಹೊಸ ಬಸ್ ನಿಲ್ದಾಣ ಕ್ರಾಸ್‌ನಿಂದ ಸಮೀಪದ ಶ್ರೀ ಕ್ಷೇತ್ರ ಸೊಗಲಕ್ಕೆ ತೆರಳುವ ಎಂಟು ಕಿ. ಮೀ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆಗಾಗ ಸುರಿದ ಮಳೆ ಹೊಡೆತಕ್ಕೆ ಕಿತ್ತು ಕಿನಾರಿಯಾಗಿ ತೆಗ್ಗು ಗುಂಡಿಗಳೇ ಗೋಚರಿಸುತ್ತಿದ್ದು, ಸಂಪೂರ್ಣ ಹಾಳಾಗಿ ಸಂಚಾರಕ್ಕೆ ತೀವ್ರ ತರದ ತೊಂದರೆಯಾಗಿದೆ. ಈ ರಸ್ತೆಯನ್ನು ಮರು ನಿರ್ಮಾಣ ಕಾಮಗಾರಿಗೆಂದೇ ಸಾಕಷ್ಟು ಹಣ ಮಂಜೂರಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆ …
Read More »ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಬರಹ : ಸಾಹಿತಿ ಪ.ರಾಮಕೃಷ್ಣಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ : ವೀರೇಂದ್ರ ಹೆಗ್ಗಡೆ
ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಬರಹ : ಸಾಹಿತಿ ಪ.ರಾಮಕೃಷ್ಣಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ : ವೀರೇಂದ್ರ ಹೆಗ್ಗಡೆ ಬೆಳ್ತಂಗಡಿ : ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ …
Read More »ಇತಿಹಾಸದಲ್ಲೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆ: ಡಾ. ಡಿ. ವೀರೇಂದ್ರ ಹೆಗ್ಗಡೆ
ಇತಿಹಾಸದಲ್ಲೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ : ಜೈನ ಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ದಿಗ್ಧಮೆ ವ್ಯಕ್ತಪಡಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆಯಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೆಂದಿಗೂ ಇಂತಹ …
Read More »ಕೊನೆಗೂ ರದ್ದಾಯ್ತು ನೇಮಕಾತಿ ಸಂದರ್ಶನ
ಕೊನೆಗೂ ರದ್ದಾಯ್ತು ನೇಮಕಾತಿ ಸಂದರ್ಶನ ಬೆಳಗಾವಿ : ಎನ್.ಪಿ.ಸಿ.ಡಿ.ಸಿ.ಸ್/ ಎನ್.ಪಿ.ಹೆಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ / ಕಿಯರು ಹಾಗೂ ಆಪ್ತ ಸಮಾಲೋಚಕರ ನೇಮಕಾತಿಗಾಗಿ ಜುಲೈ 11 ರಂದು ನಡೆಸಲು ಉದ್ದೇಶಿಸಿದ್ದ ನೇರ ಸಂದರ್ಶನವನ್ನು ರದ್ದುಗೊಳಿಸಲಾಗಿರುತ್ತದೆ. ನೇರ / ಗುತ್ತಿಗೆ ನೇಮಕಾತಿಯ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸಿ ಘನ ಉಚ್ಛ ನ್ಯಾಯಾಲಯ ಮತ್ತು ಘನ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನೇರ …
Read More »ಭಕ್ತರ ಅಶ್ರುತಾರ್ಪಣ ನಡುವೆ ಜೈನ ಮುನಿಗಳು ಪಂಚಭೂತಗಳಲ್ಲಿ ಲೀನ
ಭಕ್ತರ ಅಶ್ರುತಾರ್ಪಣ ನಡುವೆ ಜೈನ ಮುನಿಗಳು ಪಂಚಭೂತಗಳಲ್ಲಿ ಲೀನ ಬೆಳಗಾವಿ : ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರ ಅಂತ್ಯಸಂಸ್ಕಾರ ರವಿವಾರ ಮಧ್ಯಾಹ್ನ ನಡೆದಿದೆ. ಜೈನ ಸಂಪ್ರದಾಯದಂತೆ ಮುನಿ ಮಹಾರಾಜರ ಸಹೋದರನ ಪುತ್ರ ಭೀಮಗೊಂಡ ಉಗಾರೆ ಅವರು ಹಿರೇಕೋಡಿ ನಂದಿ ಪರ್ವತ ಆಶ್ರಮದ ಬಳಿಯ ಕೃಷಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಿ ಮುನಿಗಳ ಪ್ರಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೀಡಿದರು. ಚಿತೆಗೆ ಅಗ್ನಿಸ್ಪರ್ಶ ನೀಡಿದ …
Read More »ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಜು. 10 ರವರೆಗೆ ಉಚಿತ ಬಸ್ ಪ್ರಯಾಣ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಜು. 10 ರವರೆಗೆ ಉಚಿತ ಬಸ್ ಪ್ರಯಾಣ ಬೆಳಗಾವಿ : ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಹೊಸದಾಗಿ ಶಾಲಾ ಕಾಲೇಜು ಪ್ರವೇಶಾತಿ ಪಡೆದ 1 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಮುಲಕ ಅರ್ಜಿ ಸಲ್ಲಿಕೆ ಜು,12 ರಿಂದ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸೇವಾಸಿಂಧು ಮುಖಾಂತರ ಸಲ್ಲಿಸಲಾದ ಅರ್ಜಿ ಸ್ವೀಕೃತಿ ಹಾಗೂ ಪೋಟೋ ಹೊಂದಿರುವ ಯಾವುದಾದರೂ ಅಧೀಕೃತ …
Read More »ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ ಬೆಳಗಾವಿ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೩-೨೪ನೇ ಸಾಲಿಗೆ ತೋಟಗಾರಿಕೆ ಚಟುವಟಿಕೆಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ನೀಡಲಾಗುತ್ತಿದೆ. ಸದರಿ ಯೋಜನೆಯಡಿ ದ್ರಾಕ್ಷಿ, ಬಾಳೆ, ದಾಳಿಂಬೆ, ಮಾವು, ಸೀಬೆ, ಚಿಕ್ಕು, ನಿಂಬೆ, ಡ್ರಾಗನ್, ಕರಿಬೇವು, ಗುಲಾಬಿ, ನುಗ್ಗೆ, …
Read More »ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಇರುತ್ತದೆ : ಡಾ.ಪ್ರವೀಣ್ ಪದ್ಯಾಣ
ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಇರುತ್ತದೆ : ಡಾ.ಪ್ರವೀಣ್ ಪದ್ಯಾಣ ಮಂಗಳೂರು : ನಮ್ಮ ಆಯ್ಕೆ ವಿಷಯ ಉದ್ಯೋಗಕ್ಕೆ ಕಾರಣವಲ್ಲ. ನಮ್ಮ ತಜ್ಞತೆ, ಕೌಶಲಗಳು ಉದ್ಯೋಗಕ್ಕೆ ಪೂರಕ. ಸಾಮರ್ಥ್ಯವಿದ್ದರೆ ಮಾತ್ರ ಅವಕಾಶಗಳು ಬಾಗಿಲು ತೆರೆಯುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯ ಪಟ್ಟರು. ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾ ಭವನದಲ್ಲಿ ಗುರುವಾರ ಐಕ್ಯೂಎಸಿ, ಕನ್ನಡ ಸಂಘ ಮತ್ತು ಕನ್ನಡ …
Read More »ಕೊನೆಗೂ ಬಯಲಾಯ್ತು : ಜೈನ ಮುನಿ ಕೊಲೆ ರಹಸ್ಯ
ಕೊನೆಗೂ ಬಯಲಾಯ್ತು : ಜೈನ ಮುನಿ ಕೊಲೆ ರಹಸ್ಯ ಬೆಳಗಾವಿ : ಚಿಕ್ಕೋಡಿ ತಾಲೂಕು ಹಿರೇಕೋಡಿ ಕಾಮ ಕುಮಾರ ನಂದಿ ಮಹಾರಾಜರು ಕೊಲೆಯಾಗಿರುವುದು ಕೊನೆಗೂ ಬಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಜೈನಮುನಿ ಕಾಮ ಕುಮಾರ ನಂದಿ ಮಹಾರಾಜರ ಶವ ಹುಡುಕಾಟಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹತ್ಯೆ ಮಾಡಿ ಶವ ಎಲ್ಲಿ ಹಾಕಿದ್ದೇವೆ ಸ್ಪಷ್ಟವಾಗಿ ತಿಳಿಸದೆ ಪೊಲೀಸರನ್ನು …
Read More »
YuvaBharataha Latest Kannada News