ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಚನ್ನಪ್ಪ ವಗ್ಗನ್ನವರ ಆಗ್ರಹ !!
ಯುವ ಭಾರತ ಸುದ್ದಿ, ಗೋಕಾಕ: ರಾಜ್ಯದಲ್ಲಿ ಕೋವಿಡ್ ಅಲೆಯಿಂದ ಸಣ್ಣ ಕೈಗಾರಿಕೆಗಳು ಶೇಕಡಾ ೧೫%ರಷ್ಟು ಮುಚ್ಚಿ ಹೋಗಿವೆ ಅವುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಉತ್ತೇಜಿಸುವಂತೆ ಜೆಡಿಎಸ್ ಮುಖಂಡ ಚನ್ನಪ್ಪ ವಗ್ಗನ್ನವರ ಆಗ್ರಹಿಸಿದ್ದಾರೆ.
ಶನಿವಾರದಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ರಾಜ್ಯದಲ್ಲಿ ೭-೮ ಲಕ್ಷ ಸಣ್ಣ ಸಣ್ಣ ಕೈಗಾರಿಕೆಗಳು ಇದ್ದು, ಇವುಗಳಿಂದ ಕೋಟ್ಯಾಂತರ ಜೆಎಸ್‌ಟಿ ಸಂಗ್ರಹವಾಗುತ್ತಿದೆ ಆದರೆ ಕೋವಿಡ್ ಅಲೆಯಿಂದ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಣ್ಣ ಸಣ್ಣ ಕೈಗಾರಿಕೆಗಳಿಗೆ ಬೆಂಬಲಕ್ಕೆ ನಿಲ್ಲಬೇಕಾದ ಅನಿವಾರ್ಯತೆ ಇದೆ.
ರಾಜ್ಯ ಸರ್ಕಾರ ಈಗಾಗಲೇ ಎರಡು ಬಾರಿ ವಿವಿಧ ವರ್ಗಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಸಣ್ಣ ಕೈಗಾರಿಕೆಗಳಿಗೆ ಮೇ ಹಾಗು ಜೂನ್ ಮಾಹೆಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕಗಳನ್ನು ಮಾತ್ರ ಕಡಿತಗೊಳಿಸಲಾಗಿದೆ. ಇದರಿಂದ ಪೂರ್ಣ ಪ್ರಮಾಣದ ಸಣ್ಣ ಕೈಗಾರಿಕೆಗಳಿಗೆ ಪ್ರಯೋಜನವಾಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ಮೂಲ ಆದಾಯ ಸಣ್ಣ ಕೈಗಾರಿಕೆಗಳು, ಇವುಗಳ ಉತ್ತೇಜನ ಸರಕಾರ ಮಾಡಬೇಕಿದೆ. ಕೈಗಾರಿಕಾ ಮಾಲಿಕರಲ್ಲಿ ಕಚ್ಚಾ ವಸ್ತುಗಳನ್ನು ಕೊಳ್ಳಲು ದುಡ್ಡಿಲ್ಲ. ಸ್ಥಳದ ಬಾಡಿಗೆ ಹಾಗು ಕಾರ್ಮಿಕರಿಗೆ ಸಂಬಳ ಮಾಡಲು ಮಾಲೀಕರು ಪರದಾಡುತ್ತಿದ್ದಾರೆ. ಆದರೆ ಸಣ್ಣ ಕೈಗಾರಿಕೆಗಳಿಂದ ರಾಜ್ಯದಲ್ಲಿ ೮೦ ಲಕ್ಷ ಉದ್ಯೋಗ ಸೃಷ್ಟಿಯಾಗಿವೆ. ಇದನ್ನೇ ನಂಬಿಕೊAಡಿರುವ ಲಕ್ಷಾಂತರ ಕುಟಂಬಗಳು ಬೀದಿಗೆ ಬಿದ್ದಿವೆ ಆದ್ದರಿಂದ ಕೂಡಲೇ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದ್ದಾರೆ.