ಕಾಂಗ್ರೆಸ್ ಪಕ್ಷದ ಬೆಂಬಲಿತ ನಗರಸಭೆಯ 12 ಸದಸ್ಯರು ಬಿಜೆಪಿಗೆ ಪಕ್ಷಕ್ಕೆ ಜೈ..!!
ಯುವ ಭಾರತ ಸುದ್ದಿ, ಗೋಕಾಕ : ಇಲ್ಲಿಯ ನಗರಸಭೆ ಮೊದಲ ಬಾರಿಗೆ ಬಿಜೆಪಿ ಮಡಿಲಿಗೆ ಸೇರುವುದು ಖಚಿತವಾಗಿದೆ.17-10-2020ರ ಶನಿವಾರದಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.
ಒಟ್ಟೂ 31 ಸದಸ್ಯರ ಪೈಕಿ ಇಬ್ಬರು ಮೃತರಾಗಿದ್ದು, 29 ಸದಸ್ಯರಿದ್ದಾರೆ. ಎಲ್ಲರೂ ರಮೇಶ ಜಾರಕಿಹೊಳಿ ಪರವಾಗಿ ಜೈ ಎಂದಿದ್ದು, ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುವುದು ಖಚಿತವಾಗಿದೆ.
ಗುರುವಾರ ಬೆಳಗ್ಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಎಲ್ಲ ಸದಸ್ಯರ ಸಭೆ ನಡೆಸಿದ್ದಾರೆ.
ಗೋಕಾಕ ನಗರಸಭೆ ಚುನಾವಣೆಯಲ್ಲೂ ತಂತ್ರಗಾರಿಕೆ ಮಾಡಿದ್ದ ರಮೇಶ ಜಾರಿಕಿಹೊಳಿ, ಪಕ್ಷೇತರರಾಗಿಯೇ ಎಲ್ಲರನ್ನೂ ಆಯ್ಕೆ ಮಾಡಿಸಿದ್ದರು. ನಂತರ ಅವರು ಕಾಂಗ್ರೆಸ್ ನಲ್ಲಿದ್ದಾಗ ಕಾಗ್ರೆಸ್ ಗೆ ಜೈ ಎಂದಿದ್ದವರೆಲ್ಲ ಈಗ ಬಿಜೆಪಿಗೆ ಜೈ ಎನ್ನುತ್ತಿದ್ದಾರೆ.
ಗೋಕಾಕ ಮತಕ್ಷೇತ್ರದ ರಾಜಕೀಯ ಮಟ್ಟದಲ್ಲಿ ಇಂದು ಅಚ್ಚರಿ ಹಾಗೂ ಅನೀರಿಕ್ಷತ ಬೆಳವಣಿಗೆಗೆ ಸಾಕ್ಷಿಯಾಯಿತು. ಗೋಕಾಕ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಗೋಕಾಕ ನಗರಸಭೆಯ 12 ಪಕ್ಷೇತರ ಸದಸ್ಯರು ಇಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಿದರು ಗೋಕಾಕ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಗೋಕಾಕ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ತೀವ್ರ ಪರ ವಿರೋಧ ಚರ್ಚೆ ಮಧ್ಯೆ ಸಾಹುಕಾರ ಗೆದ್ದು ಬಿಗಿದ್ದು ಬಿಜೆಪಿ ಪಕ್ಷದ ತೆಕ್ಕೆಗೆ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಭಾಗ್ಯ ವಲಿದಿದೆ.ಸಾಹುಕಾರ ರಾಜಕೀಯ ಚಾಣಾಕ್ಷ ತಂತ್ರಗಾರಿಕೆ ಯಶಸ್ವಿಯಾಗಿದೆ.