Breaking News

ಸಂತೋಷ ಪಾಟೀಲ ಕೇಸಗೆ ಬಿಗ್ ಟ್ವೀಸ್ಟ್- ರಮೇಶ ಜಾರಕಿಹೊಳಿ ಮೊರೆ ಹೊದ 12ಜನ ಗುತ್ತಿಗೇದಾರರು.!

Spread the love

ಸಂತೋಷ ಪಾಟೀಲ ಕೇಸಗೆ ಬಿಗ್ ಟ್ವೀಸ್ಟ್- ರಮೇಶ ಜಾರಕಿಹೊಳಿ ಮೊರೆ ಹೊದ 12ಜನ ಗುತ್ತಿಗೇದಾರರು.!


 ಯುವ ಭಾರತ ಸುದ್ದಿ  ಗೋಕಾಕ: ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮುನ್ನೋಳಕರ್ ನೇತೃತ್ವದಲ್ಲಿ 12ಜನ ಗುತ್ತಿಗೆದಾರರಿಂದ ನಗರದಲ್ಲಿ ಶಾಸಕ ರಮೇಶ ಜಾರಕಿಹೋಳಿ ಅವರನ್ನು ಭೇಟಿ ಮಾಡಿ ಕಾಮಗಾರಿ ಮಾಡಿರುವ ನಮ್ಮ ಹಣವನ್ನು ಸರಕಾರದಿಂದ ಸಂದಾಯ ಮಾಡಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಮೊರೆ ಹೊದ ಘಟನೆ ಸೋಮವಾರದಂದು ನಡೆದಿದೆ.
ಕೋಟ್ಯಾಂತರ ರೂಪಾಯಿ ಹಣ ಹಾಕಿ ಕಾಮಗಾರಿ ಮಾಡಿ ಹಣ ಬಾರದ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಗುತ್ತಿಗೆದಾರರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು, ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿದರು.
ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಿಂದ ಹೊರಬಂದು ಪತ್ರಕರ್ತರೊಂದಿಗೆ ಮಾತನಾಡಿದ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮುನ್ನೋಳಕರ್ ಒಂದುವರೆ ವರ್ಷದ ಹಿಂದೆ ನಾನು ಸದಸ್ಯರು ಸೇರಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಜಾರಕಿಹೋಳಿ ಭೇಟಿ ಮಾಡಿದ್ದೆವು, ೧೦೦ ವರ್ಷಕ್ಕೊಮ್ಮೆ ನಡೆಯುವ ಲಕ್ಷ್ಮೀ ದೇವಿ ಜಾತ್ರೆ ನಡೆಯುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಮನವಿ ಮಾಡಿದ್ದೀವಿ. ಅದರಂತೆ ಸಂತೋಷ ಪಾಟೀಲ್‌ಗೆ ನಮ್ಮ ಗ್ರಾ.ಪಂ.ಪತ್ರ ನೀಡಿದ್ದೆ. ಸಂತೋಷ ಜೊತೆ ಎರಡು ಬಾರಿ ಈಶ್ವರಪ್ಪ ಅವರನ್ನ ಭೇಟಿ ಮಾಡಿದ್ದೆ, ನನಗೆ ಕನ್ನಡ ಚನ್ನಾಗಿ ಬಾರದ ಕಾರಣ ಸಂತೋಷ ಅವರು ಈಶ್ವರಪ್ಪ ಜೊತೆ ಮಾತನಾಡಿದರು. ೪೦ಪ್ರತಿಶತ ಕಮೀಷನ್ ಕುರಿತು ಆ ಸಂದರ್ಭದಲ್ಲಿ ಯಾವುದೇ ಮಾತು ನಡೆದಿರಲಿಲ್ಲ. ಮೃತ ಸಂತೋಷ ಕಾಮಗಾರಿ ಮಾಡಿದ ಹಣ ಬಿಡುಗಡೆಗೆ ಸಬ್ ಗುತ್ತಿಗೆದಾರರಿಂದ ಹಣ ಪಡೆದಿರುವುದು ಗೊತ್ತಿರಲಿಲ್ಲ. ಎಲ್ಲ ಗುತ್ತಿಗೆದಾರಿಂದ ಬಿಲ್ ಬಿಡುಗಡೆ ಗೆ ಸಂತೋಷ ಪಾಟೀಲ್ ೯೮ಲಕ್ಷ ರೂ. ಪಡೆದಿದ್ದಾರೆ ಎಂದರು.
ಒಮ್ಮೆ ಸಂತೋಷ ಪಾಟೀಲ್ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೆಲಸ ಮಾಡುವ ವಿಚಾರದಲ್ಲಿ ಗ್ರಾಮೀಣ ತೊಂದರೆ ನೀಡುತ್ತಿದ್ದಾರೆ ಅಂತ ಹೇಳಿದ್ದರು. ಅಲ್ಲದೇ ಬಿಜೆಪಿ ಜನ ಇದನ್ನ ಮಾಡುತ್ತಿದ್ದಾರೆಂದು ನಮಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೆಲಸ ಮಾಡಲು ವಿರೋಧ ಮಾಡಿದ್ದರು. ಇದರ ಜೊತೆಗೆ ಆಫೀಸರ್ ಗಳಿಗೂ ಫೋನ್ ಮಾಡಿಕೆಲಸ ನಿಲ್ಲಿಸಲು ಹೇಳಿದ್ದರು ಎಂದು ಲಕ್ಷಿö್ಮÃ ವಿರುದ್ಧ ಗ್ರಾಪಂ ಅಧ್ಯಕ್ಷ ನಾಗೇಶ ಗುಡುಗಿದರು.
ಸಂತೋಷ ಪಾಟೀಲ್ ಜೀವಂತ ಇದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಿದ್ದರು? ಕಾಮಗಾರಿ ಬಿಲ್‌ಗಾಗಿ ಪರದಾಡುತ್ತಿದ್ದಾಗ ಸಪೋರ್ಟ್ ಮಾಡದ ಹೆಬ್ಬಾಳಕರ್ ಸಂತೋಷ ಪಾಟೀಲ ಮರಣದ ನಂತರ ಸ್ಟಂಟ್ ಬಾಜಿ ಮಾಡುವ ಅವಶ್ಯಕತೆ ಏನಿದೆ? ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆದಾಗ ಸಪೋರ್ಟ್ ಮಾಡಬೇಕಿತ್ತು. ಸಪೋರ್ಟ್ ಮಾಡಿದ್ದರೆ ಸಂತೋಷ ಪಾಟೀಲ್ ಜೀವಂತವಾಗಿರುತ್ತಿದ್ದರು. ಅಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಸಂಬAಧಿ ಅಂತಲೂ ಸಂತೋಷ ಪಾಟೀಲ್ ನನಗೆ ಹೇಳುತ್ತಿದ್ದರು.
ಹಿಂಡಲಗಾ ಗ್ರಾಮದ ಗುತ್ತಿಗೆದಾರ ಬಾಳಕೃಷ್ಣ ದಂಡಗಲಕರ್ ಮಾತನಾಡಿ, ಹಿಂಡಲಗಾದಲ್ಲಿ ನಾನು ಒಟ್ಟು ೩೭ಲಕ್ಷ ರೂ. ಕಾಮಗಾರಿ ಮಾಡಿದ್ದೇನೆ. ಸಂತೋಷ ಪಾಟೀಲ ಬಿಲ್ ಕೊಡಲು ಇಂದು ನಾಳೆ ಅಂತ ಹೇಳುತ್ತಿದ್ದರು. ವರ್ಕ್ ಆರ್ಡರ್ ಸರ್ಟಿಫಿಕೇಟ್ ನನ್ನ ಬಳಿ ಇದೆ ಅಂತ ಹೇಳುತ್ತಿದ್ದರು. ೩ಲಕ್ಷ ರೂ. ಬಿಲ್ ಬಿಡುಗಡೆ ಮಾಡಿಸಿಕೊಂಡು ಬರಲು ಕೊಟ್ಟಿದ್ದೆವೆ ಎಂದರು.
ಗುತ್ತಿಗೆದಾರ ಸುನೀಲ್ ಚೌಗಲೆ ಮಾತನಾಡಿ, ನಾನು ೪೭ಲಕ್ಷ ರೂ ಕಾಮಗಾರಿ ಮಾಡಿದ್ದೀನಿ, ಬಿಲ್ ತೆಗೆದುಕೊಡುವುದಾಗಿ ೧೦ಲಕ್ಷ ೧೫ಸಾವಿರ ತೆಗೆದುಕೊಂಡಿದ್ದಾನೆ. ವರ್ಕ ಆರ್ಡರ್ ನಮಗೆ ತೋರಿಸಿಲ್ಲ, ನಮ್ಮ ಬಳಿ ಇದೆ ಅಂತ ಹೇಳಿದ್ದಾರೆ. ಸಚಿವ ಈಶ್ವರಪ್ಪ ಭೇಟಿ ಮಾಡಿಲ್ಲ, ಸಂತೋಷ ಪಾಟೀಲ್ ವಿಶ್ವಾಸದ ಮೇಲೆ ಕೆಲಸ ಮಾಡಿದ್ದೀವಿ. ಅಲ್ಲದೇ ದುಡ್ಡಿಗಾಗಿ ನಾವು ಸಂತೋಷ ಪಾಟೀ¯ ಗೆ ಟಾರ್ಚರ್ ಸಹ ಕೊಟ್ಟಿಲ್ಲ. ಈಗ ಸಂತೋಷ ಪಾಟೀಲ್ ಮೃತಪಟ್ಟಿದ್ದಾರೆ. ನಮ್ಮ ಹಣ ಕೊಡುವವರು ಯಾರು.? ಎನ್ನುವ ಸಮಸ್ಯೆ ಕಾಡುತ್ತಿದೆ. ಎಂದರು.
ಮತ್ತೊರ್ವ ಗುತ್ತಿಗೇದಾರ ರಾಜು ಜಾಧವ ಮಾತನಾಡಿ, ನಾನು ೨೭ಲಕ್ಷ ರೂ ರಸ್ತೆ ಕಾಮಗಾರಿ ಮಾಡಿದ್ದೇನೆ. ಕೆಲಸ ಮುಗಿಸಿ ಒಂದು ತಿಂಗಳಲ್ಲಿ ನಿಮ್ಮ ಪೇಮೆಂಟ್ ಸಿಗುತ್ತೆ ಅಂತ ಸಂತೋಷ ಹೇಳಿದ್ದರು. ಆದರೆ ಕೆಲಸ ಮುಗಿದು ಒಂದು ವರ್ಷ ಆಯ್ತು ಇದುವರೆಗೆ ಬಿಲ್ ಆಗಿಲ್ಲ. ಇಂದು ನಾಳೆ, ಅಲ್ಲಿ ಅಮೌಂಟ್ ಕೊಡಬೇಕು, ಇಲ್ಲಿ ಕೊಡಬೇಕು ಅಂತ ಸಂತೋಷ ಪಾಟೀಲ್ ಹೇಳುತ್ತಿದ್ದರು. ಹಣ ಬಿಡುಗಡೆ ಮಾಡಿಸಿಕೊಂಡು ಬರುವಂತೆ ಹೆಚ್ಚುವರಿ ಮೂರು ಲಕ್ಷ ಹೆಚ್ಚುವರಿಯಾಗಿ ನೀಡಿದ್ದೇನೆ ಎಂದು ಪತ್ರಕರ್ತರ ಮುಂದೆ ತಮ್ಮ ಅಳಲು ತೋಡಿಕೊಂಡರು.


Spread the love

About Yuva Bharatha

Check Also

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …

Leave a Reply

Your email address will not be published. Required fields are marked *

5 × 4 =