Breaking News

ಸಿಪಿಐ ರಾಘವೇಂದ್ರ ಹಳ್ಳೂರ ಧಕ್ಷ ಅಧಿಕಾರಿ!

Spread the love

 

ಸಿಪಿಐ ರಾಘವೇಂದ್ರ ಹಳ್ಳೂರ ಧಕ್ಷ ಅಧಿಕಾರಿ!

ಯುವ ಭಾರತ ಸುದ್ದಿ, ಗೋಕಾಕ್: ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣೆಯ ಸಿಪಿಐ ರಾಘವೇಂದ್ರ ಹಳ್ಳೂರ ಧಕ್ಷ ಅಧಿಕಾರಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿಷ್ಪಕ್ಷಪಾತ ಕೆಲಸ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಧಕ್ಷ ಅಧಿಕಾರಿಗಳು ಸಿಗುವದು ಅಪರೂಪ ಎಂದು ಠಾಣೆಗೆ ಹೋಗಿ ಬಂದ ಎಲ್ಲಾ ಸಾರ್ವಜನಿಕರು ಸಾಹೇಬ್ರು ಸಮಸ್ಯೆಗಳನ್ನು ಆಲಿಸಿ ಸೂಕ್ತ ಸಲಹೆ ನೀಡಿ ಸಮಾಜದ ಶಾಂತಿ ಪಾಲನೆಗೆ ಸಹಕರಿಸುತ್ತಿದ್ದಾರೆ.ಎಂದು ಸಾರ್ವಜನಿಕರು ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ.

ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ ಹಾಗೂ ಬೀಟ್ ವ್ಯವಸ್ಥೆ ಸುಗಮವಾಗಿ ನಡೆಸಿದ್ದಾರೆ. ಆ ವ್ಯಾಪ್ತಿಯಲ್ಲಿ ನಡೆದ ಎಷ್ಟೋ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿದು ಜೈಲಿಗೆ ತಳ್ಳಿರುವ ಟ್ವಿಸ್ಟ್ ಪ್ರಕರಣಗಳನ್ನು ಭೇದಿಸಿದ್ದಾರೆ. ಒಟ್ಟಿನಲ್ಲಿ ಒಂದು ಠಾಣೆಯನ್ನ ಹಾಗೂ ಸಿಬ್ಬಂದಿಗಳನ್ನ ಸಮಾಧಾನ ಹಾಗೂ ವಿನಯದಿಂದ ಮಾತನಾಡುವದು ದೂರು ಕೊಡಲು ಬಂದ ದೂರುದಾರರ ಸಮಸ್ಯೆ ಆಲಿಸಿ ಸಿಟ್ಟಿಗೆ ಬರದೆ ಕೆಲಸ ನಿರ್ವಹಿಸುವ ಅಧಿಕಾರಿ ಸಿಪಿಐ ರಾಘವೇಂದ್ರ ಹಳ್ಳೂರ್ ಇವರಿಗೆ ಸಲ್ಲುತ್ತದೆ. ಅಕ್ರಮ ಮಾಡುವರನ್ನು ಸಿಪಿಐ ಹಳ್ಳೂರ್ ಎಂದಿಗೂ ಬಿಟ್ಟಿಲ್ಲ ಕೇಸ್ ಜಡದ ನ್ಯಾಯಾಲಯಕ್ಕೆ ಕಳಿಸುತ್ತಾರೆ.

ಹಾಗೆ ಸಾರ್ವಜನಿಕರು ಸಂಚಾರ ನಿಯಮಗಳನ್ನ ಪಾಲಿಸುವಲ್ಲಿ ತನಿಖೆ ಮಾಡುವದು ಟ್ರಿಬಲ್ ರೈಡಿಂಗ್ ಲೈಸನ್ಸ್ ಇನ್ಶೂರೆನ್ಸ್ ಚೆಕ್ ಹೀಗೆ ಅನೇಕ ಕಾನೂನು ಚೌಕಟ್ಟಿನಲ್ಲಿ ಇರುವ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳುವದು ಹೆಲ್ಮೆಟ್ ಧರಿಸಿ ಜೇವ ಉಳಿಸಿಕೊಳ್ಳಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ಕುಡಿದು ವಾಹನ ಚಾಲನೆ ಮಾಡಬಾರದು ಎಂದು ಪ್ರತಿ ದಿನ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಸ್ಕ್ ಇಲ್ಲದವರಿಗೆ ದಂಡ ಹಾಕುವದು ಹೀಗೆ ಇನ್ನು ಹೆಚ್ಚಿನ ಸಾರ್ವಜನಿಕ ಕುಂದು ಕೊರತೆಗಳಿಗೆ ಸಹಕರಿಸುತ್ತಾರೆ ಎಂದು ಸಾರ್ವಜನಿಕರು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.

ಇನ್ನು ಕೆಲ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಎತ್ತಿದ ಕೈ ಸಿಪಿಐ ರಾಘವೇಂದ್ರ ಹಳ್ಳೂರ. ಪೊಲೀಸ್ ಇಲಾಖೆಯಲ್ಲಿ ದಷ್ಟ ಅಧಿಕಾರಿ ಹಾಗೂ ಶಿಸ್ತು ಪಾಲನೆ ಮಾಡುತ್ತಾರೆ.ಬೆಳಗಾವಿ ಪೊಲೀಸ್ ಕಮಿಷನರವರು ಕೂಡ ಸಿಪಿಐ ರಾಘವೇಂದ್ರ ಹಳ್ಳೂರ ಇವರ ಕರ್ತವ್ಯ ಕೆಲಸಕ್ಕೆ ಶ್ಲಾಘಿಸಿದ್ದಾರೆ.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

one × three =