ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಶಿವಾನಂದ ಡೋಣಿ ಅನರ್ಹಗೊಳಿಸಿ ಆದೇಶ.!
ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿ ಸೋಸೈಟಿಯ ೧೧ಜನ ಸದಸ್ಯರು ರಾಜಿನಾಮೆ ಸಲ್ಲಿಸಿದ ಹಿನ್ನಲೆ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಶಿವಾನಂದ ನಿಂಗಪ್ಪ ಡೋಣಿ ಅನರ್ಹರನ್ನಾಗಿಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಆದೇಶಿಸಿಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಕಳೆದ ಸೆಪ್ಟೇಂಬರ ೨೬ರಂದು ೧೧ಜನ ಸದಸ್ಯರು ತಮ್ಮ ರಾಜಿನಾಮೆಯನ್ನು ನೀಡಿದ್ದು, ೧೫ದಿನಗಳ ನಂತರ ಬೈಲಹೊಂಗಲ ಉಪವಿಭಾಗಾಧಿಕಾರಿಗಳು ವಿಶೇಷ ಅಧಿಕಾರಿಗಳನ್ನು ಸಂಘಕ್ಕೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದ್ದರು. ಹೀಗಾಗಿ ಸಹಕಾರ ಕಾಯ್ದೆಯಲ್ಲಿ ಶಿವಾನಂದ ಡೋಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿಯ ಪ್ರತಿನಿಧಿಸುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ಆಡಳಿತ ಮಂಡಳಿ ರದ್ದುಗೊಂಡಿರುವ ಹಿನ್ನಲೆ ಶಿವಾನಂದ ನಿಂಗಪ್ಪ ಡೋಣಿ ಅವರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣ ಸಹಕಾರಿ ಸಂಘಗಳ ಸಂಯುಕ್ತ ನಿಭಂಧಕರು ವಿಚಾರಣೆಗೆ ಕರೆಯಲಾಗಿತ್ತು. ಕರ್ನಾಟಕ ಸಹಕಾರಿ ಸಂಘದ ಕಾಯ್ದೆ ೧೯೫೯ರ ಅನ್ವಯ ಶಿವಾನಂದ ಡೋಣಿ ಅವರನ್ನು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಗಿಯುವ ವರೆಗೆ ಅನರ್ಹಗೊಳಿಸಿ ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ ಎಮ್ ಪಾಟೀಲ ಆದೇಶಿಸಿದ್ದಾರೆ.