ಸವದಿ ಕುಟುಂಬದಿoದ ಹಲ್ಲೆ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ಡೆಪ್ಪ ತೋಳಿನವರ ಖಂಡನೆ.

ಗೋಕಾಕ: ಬೆಳಗಾವಿ ಡಿಸಿಸಿ ಬ್ಯಾಂಕ ನೌಕರರ ಯೂನಿಯನ್ ಅಧ್ಯಕ್ಷ ನಿಂಗರಾಜ(ನಿ0ಗಪ್ಪ) ಕರೆಣ್ಣನವರ ಮೇಲೆ ಮಾಜಿ ಉಪಮುಖ್ಯಮಂತ್ರಿ, ಡಿಸಿಸಿ ಬ್ಯಾಂಕನ ಹಿರಿಯ ನಿರ್ದೇಶಕ ಹಾಗೂ ಅಥಣಿ ಶಾಸಕರಾದ ಲಕ್ಷö್ಮಣ ಸವದಿ ಮತ್ತು ಬೆಂಬಲಿಗರು ನಡೆಸಿದ ಹಲ್ಲೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ಡೆಪ್ಪ ತೋಳಿನವರ ತೀವೃವಾಗಿ ಖಂಡಿಸಿದರು.
ಅವರು, ರವಿವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಡಿಸಿಸಿ ಬ್ಯಾಂಕ ನೌಕರರ ಯೂನಿಯನ್ ಅಧ್ಯಕ್ಷ ನಿಂಗರಾಜ(ನಿ0ಗಪ್ಪ) ಕರೆಣ್ಣನವರ ಅವರನ್ನು ನೌಕರರ ಸಂಘದ ಕೆಲಸದ ನಿಮಿತ್ಯ ಅಥಣಿ ಪಟ್ಟಣದಲ್ಲಿ ಶಾಸಕ ಲಕ್ಷö್ಮಣ ಸವದಿ, ಪುತ್ರ ಚಿದಾನಂದ ಸವದಿ ಹಾಗೂ ಬೆಂಬಲಿಗರು ಶಾಸಕರ ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ. ಸವದಿಯವರು ತಮ್ಮ ಬೆಂಬಲಿಗರೊ0ದಿಗೆ ರಾಜಕೀಯ ವೈಷಮ್ಯದಿಂದಾಗಿ ಹಿಂದುಳಿದ ಕುರುಬ ಸಮಾಜದ ಯೂನಿಯನ್ ಅಧ್ಯಕ್ಷ ನಿಂಗರಾಜ(ನಿ0ಗಪ್ಪ) ಕರೆಣ್ಣನವರ ಅವರ ಮೇಲೆ ಹಲ್ಲೆ ನಡೆಸಿದ್ದು ತೀವೃ ಕಳವಳಕಾರಿಯಾಗಿದೆ. ಹಲ್ಲೆ ಕುರಿತು ಸ್ವತಃ ಹಲ್ಲೆಗೊಳಗಾದ ನಿಂಗರಾಜ ಅವರು ಮಾಧ್ಯಮಗಳ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಆದರೆ ಆಡಳಿತಾರೂಢ ಕಾಂಗ್ರೇಸ್ ಪಕ್ಷದ ಶಾಸಕರಾಗಿರುವ ಸವದಿಯವರ ಒತ್ತಡದಿಂದ ಪೋಲಿಸರು ಪ್ರಕರಣವನ್ನು ಎಫ್‌ಆಯ್‌ಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ಸವದಿ ಹಾಗು ಬೆಂಬಲಿಗರಿAದ ಹಲ್ಲೆಗೊಳಗಾದ ಯೂನಿಯನ್ ಅಧ್ಯಕ್ಷ ನಿಂಗರಾಜ ತೀವೃ ಗಾಯಗೊಂಡಿದ್ದು ರಕ್ತಸಿಕ್ತವಾಗಿ ಅಥಣಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಕೂಡಲೇ ಸರಕಾರ ಮಧ್ಯಸ್ತಿಕೆ ವಹಿಸಿ ಈ ಪ್ರಕರಣದ ಸೂಕ್ತ ತನಿಖೆ ನಡೆಸಲು ಕ್ರಮವಹಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಬೆಳಗಾವಿ ಜಿಲ್ಲಾ ಕುರುಬ ಸಮಾಜದಿಂದ ಉಗ್ರ ಪ್ರತಿಭಟನೆಯನ್ನು ಮಾಡಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಸಳಿಗುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ನಸಲಾಪೂರೆ, ಸಮಾಜ ಮುಖಂಡರಾದ ಸಿದ್ದಲಿಂಗಪ್ಪ ಕಂಬಳಿ, ಲಕ್ಷö್ಮಣ ಮಸಗುಪ್ಪಿ, ಮಂಜುನಾಥ ಸಣ್ಣಕ್ಕಿ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ಗಿರೀಶ ಹಳ್ಳೂರ, ಅವ್ವಣ್ಣ ಮೋಡಿ, ವಿಜಯ ಜಂಬಗಿ, ಲಕ್ಕಪ್ಪ ಹೊಸಕುರಬರ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ತುಕಾರಾಮ ಗೋಧಿ, ಯಲ್ಲಪ್ಪ ಕರಲೆಪ್ಪಗೋಳ, ಮುತ್ತೆಪ್ಪ ಬೀರನಗಡ್ಡಿ, ಸಂತೋಷ ಕಟ್ಟಿಕಾರ ಸೇರಿದಂತೆ ಇತರರು ಇದ್ದರು.
YuvaBharataha Latest Kannada News