ಗೋಕಾಕ: ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳ ಅಭಿವೃದ್ಧಿಗೆ ೨೦೧೯-೨೦ನೇ ಸಾಲಿನ ವಿಶೇಷ ಘಟಕ (ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‌ಪಿ) ಅಡಿಯಲ್ಲಿ ರೂ ೩೦ ಕೋಟಿ ಮತ್ತು ೨೦೧೯-೨೦ರ ಉಳಿಕೆ ಅನುದಾನದಲ್ಲಿ ರೂ ೩೧.೦೫ ಕೋಟಿ ರೂ ಅನುದಾನ ಒಟ್ಟು ೬೧ ಕೋಟಿರೂ ಮಂಜುರಾತಿ ಪಡೆದು ಕಾಮಗಾರಿ ಕೈಗೆತ್ತಕೊಳ್ಳಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಮತಕ್ಷೇತ್ರದ ವಿವಿಧ ಗ್ರಾಮಗಳ ಎಸ್/ಎಸ್‌ಟಿ ಜನಾಂಗದ ಕಾಲೋನಿ ಅಭಿವೃದ್ಧಿಗೆ ಹಾಗೂ ರೈತಾಪಿ ವರ್ಗದವರ ಅನುಕೂಲಕ್ಕಾಗಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಪ್ರೀಕಾಸ್ಟ್ ಪೇರ‍್ಸ್ ರಸ್ತೆ, ತೆರೆದ ಬಾವಿ, ಸಮುದಾಯ ಭವನ ಹಾಗೂ ಪಿಕÀಅಪ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿಯ ಜೊತೆಗೆ ಅತಿಶೀಘ್ರದಲ್ಲೆ ಕಾಮಗಾರಿ ಪೂರ್ಣಗೊಳಿಸಲಾಗುವದು. ಅಲ್ಲದೇ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಇದೇ ೨೦೧೯-೨೦ರ ಆರ್ಥಿಕ ವರ್ಷದ ಒಳಗಾಗಿ ೧೦೦ ಕೋಟಿ ರೂಪಾಯಿ ಅನುಮೋದನೆಗೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು, ಅತಿಶೀಘ್ರದಲ್ಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
