
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ.
ಯುವ ಭಾರತ ಸುುದ್ದಿ ಗೋಕಾಕ್: ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ.22 ರಿಂದ 25ರ ನಾಲ್ಕು ದಿನಗಳ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ.22ರಂದು ಕೇಂದ್ರ ಕಚೇರಿ ಬೆಂಗಳೂರಿನಿAದ ಆಗಮಿಸಿ ಗೋಕಾಕನಲ್ಲಿ ವಾಸ್ತವ್ಯ. ದಿ.23 ರಂದು ಬೆಳಿಗ್ಗೆ 9.30ಕ್ಕೆ ಗೋಕಾಕ ಗೃಹಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು. ದಿ. 24 ರಂದು ಬೆಳಿಗ್ಗೆ 10.40 ಗಂಟೆಗೆ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 12.40 ಗಂಟೆಗೆ ಗೋಕಾಕ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 2ಗಂಟೆಗೆ ಹಿಡಕಲ್ ಜಲಾಶಯ ಪರಿವೀಕ್ಷಣೆ ನಡೆಸಿ, ಸಂಜೆ ಗೋಕಾಕ ವಾಸ್ತವ್ಯ ಮಾಡುವರು.
ದಿ.25 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಕೋವಿಡ್ ೧೯ ಹಾಗೂ ನೆರೆಹಾವಳಿ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ ಗೋಕಾಕ ವಾಸ್ತವ್ಯ. ದಿ. 26ರಂದು ಗೋಕಾಕ ರಸ್ತೆ ಮೂಲಕ ಬೆಂಗಳೂರು ಕೇಂದ್ರ ಕಚೇರಿಗೆ ಪ್ರಯಾಣ ಬೆಳೆದಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮಾರಂಗಪ್ಪನವರ ತಿಳಿಸಿದ್ದಾರೆ.
YuvaBharataha Latest Kannada News