Breaking News

ಬಂಗಾರ ಕದ್ದವರನ್ನು ರಕ್ಷಿಸಲು ಇನಾಮದಾರ ಬಲಿಪಶು ಆಗಿದ್ದಾರಾ..?

Spread the love

ಬಂಗಾರ ಕದ್ದವರನ್ನು ರಕ್ಷಿಸಲು ಇನಾಮದಾರ ಬಲಿಪಶು ಆಗಿದ್ದಾರಾ?

ಸಂಕೇಶ್ವರ ಭಾಗದಲ್ಲಿ ಪ್ರಭಾವಿ ಆಗಿರುವ ಕಿರಣನ ಸತ್ಯಾಸತ್ಯತೆ ಬಯಲಾಗಬೇಕು.

ಯುವ ಭಾರತ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಯಮಕನಮಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಎರ್ಟಿಗಾ ಕಾರಿನಲ್ಲಿ ಇಟ್ಟಿದ್ದಾರೆ ಎನ್ನಲಾಗಿರುವ ಐದು ಕೆ.ಜಿ. ಬಂಗಾರ ಕಳ್ಳತನದ ಪ್ರಕರಣದಲ್ಲಿ ಗೋಕಾವಿಯ ಪ್ರಾಮಾಣಿಕ ಅಧಿಕಾರಿ ಡಿಎಸ್ಪಿ ಜಾವೇದ ಇನಾಮದಾರ ಅವರನ್ನು ಸಿಗಿಸಿ ಮೋಜು ನೋಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾದು ಕುಳಿತಿವೆ ಎಂಬುದು ಕೇಳಿ ಬರುತ್ತಿದೆ.

ಕೆಲವು ತಿಂಗಳಿಂದ ಗೋಕಾಕನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್ಪಿ ಜಾವೇದ ಇನಾಮದಾರ ಅವರನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಕೆಳ ಹಂತದವರನ್ನೇ ಟಾರ್ಗೆಟ್ ಮಾಡಿ ಕೆಲವರು ಸೇಫ್ ಉಳಿಯಲು ಇಂಥ ನಾಟಕ ಮಾಡಿದ್ದಾರೆ ಎಂದು ಗೋಕಾಕ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ದಕ್ಷ ಅಧಿಕಾರಿ ಜಾವೇದ ಅವರ ಹೆಸರಿಗೆ ಕಳಂಕ ತರಲು ಮತ್ತು ಗೋಕಾಕ ನಗರಕ್ಕೆ ಕೆಟ್ಟ ಹೆಸರು ಇದರಲ್ಲಿ ಅಡಗಿದೆಯೇ, ಕೆಲ ಮೇಲಧಿಕಾರಿಗಳು ತಮ್ಮನ್ನು ಸೇಫ್ ಮಾಡಲು ಪ್ರಕರಣ ವಿಷಯಾಂತರ ಮಾಡಲು ಹೊರಟಿದ್ದಾರೆ ಎಂಬ ಗುಸು ಗುಸು ಮಾತು ಕೇಳಿ ಬರುತ್ತಿದೆ.

ಕಾರಿನಲ್ಲಿಯೇ ಇದ್ದ ಬಂಗಾರವನ್ನು ಕಳ್ಳತನ ಮಾಡಿ ನಂತರ ಕಾರಿನ ಕಾಜು ಒಡೆದು ನಾಟಕ ಬಯಲಾಗುವದು ಯಾವಾಗ. ಇಂಥ ನಾಟಕಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೇ ಸಿಐಡಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಚಿನ್ನ ಪತ್ತೆ ಹಚ್ಚಬೇಕು.‌ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜನರ ಆಗ್ರಹವಾಗಿದೆ.

ಈ ಪ್ರಕರಣದ ಬಳಿಕ ಯಮಕನಮರಡಿ ಠಾಣೆಯ ಇಬ್ಬರು ಪೇದೆಗಳು ಸುಮಾರು ಒಂದೂವರೆ ತಿಂಗಳು ಕಾಲ ರಜೆ ಪಡೆದಿದ್ದಾರೆ. ಇನ್ನೂವರೆಗೆ ಠಾಣೆಗೆ ಹಾಜರಾಗಿಲ್ಲ.‌ ಇದರ ಹಿಂದಿನ ಸತ್ಯಾಸತ್ಯತೆ ಹೊರಗೆ ಬರಬೇಕು. ಇದರಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿರುವ ಕಿರಣ ವೀರನಗೌಡ ಎಂಬಾತನನ್ನು ಸೂಕ್ತ ತನಿಖೆ ನಡೆಸಬೇಕಾಗಿದೆ . ಇಬ್ಬರು ಪೇದೆಗಳು ಮತ್ತು ಕಿರಣನ ವಿಚಾರಣೆ ಇನ್ನೂ ಆಗಿಲ್ಲ. ಕಿರಣ ಈ ಹಿಂದಿನ ಅವನ ಬ್ಯಾಕ್ ಗ್ರೌಂಡ್ ಏನಿದೆ ಎಂಬುದು ತನಿಖೆ ಮೂಲಕ ನಡೆಸಬೇಕು.

ಕಿರಣ ವೀರನಗೌಡ ಸಂಕೇಶ್ವರ ಭಾಗದಲ್ಲಿ ಪ್ರಭಾವಿ ಆಗಿದ್ದನು. ಅನೇಕ ಮೇಲಧಿಕಾರಿಗಳ ಸಂಪರ್ಕದಿಂದ ಕೆಲವು ದಂಧೆ ನಡೆಸುತ್ತಿದ್ದನು. ಇದು ಸಿಐಡಿ ತನಿಖೆ ಮೂಲಕ ಎಲ್ಲವೂ ಬಹಿರಂಗ ಆಗಲಿದೆ. ಇದರಲ್ಲಿ ಯಾರೇ ಇದ್ದರೂ ಬಿಡಬಾರದು ಎಂಬುದೇ ಗೋಕಾಕ ಜನತೆಯ ಆಗ್ರಹವಾಗಿದೆ.


Spread the love

About Yuva Bharatha

Check Also

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …

Leave a Reply

Your email address will not be published. Required fields are marked *

10 − 9 =