ಅಜಿತ ಪವಾರ್ ಗೆ ಹಣಕಾಸು ಖಾತೆ
ಮುಂಬೈ:
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ (ಎನ್‌ಸಿಪಿ), ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆ ಲಭಿಸಿದೆ.
ಛಗನ್ ಭುಜಬಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೀಡಲಾಗಿದೆ. ಅನಿಲ್ ಪಾಟೀಲ್‌ಗೆ ಪರಿಹಾರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣಾ ಇಲಾಖೆ, ಅದಿತಿ ಸುನೀಲ್ ತಟ್ಕರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಧನಂಜಯ್ ಮುಂಡೆಗೆ ಕೃಷಿ, ದಿಲೀಪ್ ವಾಲ್ಸೆ ಪಾಟೀಲ್‌ಗೆ ಕಂದಾಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆಯನ್ನು ನೀಡಲಾಗಿದೆ.