ಪ್ರವಾಹ ಎದುರಿಸಲು ಬೋಟ್ -ನಾವಿಕರೊಂದಿಗೆ ಗೋಕಾಕ್ ತಾಲೂಕಾಡಳಿತ ಸಿದ್ಧತೆ.!!
ಯುವ ಭಾರತ ಸುದ್ದಿ ಗೋಕಾಕ್ : ತಾಲೂಕಿನಲ್ಲಿ ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇದನ್ನು ಎದುರಿಸಲು ಗೋಕಾಕ್ ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಘಟಪ್ರಭಾ ನದಿ ತೀರದಲ್ಲಿ ಕಳೆದ ಬಾರಿಯಷ್ಟು ಪ್ರವಾಹ ಕಾಣಿಸಿಕೊಂಡರೆ ಜನರ ರಕ್ಷಣೆಗೆ ಅಗತ್ಯವಿರುವ 4ಬೋಟ್ ಗಳನ್ನ ಹಾಗೂ ಅದಕ್ಕೆ ಬೇಕಾದ ನಾವಿಕರನ್ನ ಕಾರವಾರದಿಂದ ಕರೆಯಿಸಿಕೊಳ್ಳಲಾಗಿದೆ.
ಪ್ರವಾಹ ಇನ್ನಷ್ಟು ಏರಿಕೆಯಾದರೆ ಇದನ್ನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಕಳೆದ ಪ್ರವಾಹ ಸಂದರ್ಭದಲ್ಲಿ ಮೆಳವಂಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರಿಯಾದ ಬೋಟ್ ವ್ಯವಸ್ಥೆ ಇಲ್ಲದೇ ರಕ್ಷಣಾ ಕಾರ್ಯಾಚರಣೆ ತೊಂದರೆವುಂಟಾಗಿತ್ತು. ಇದನ್ನ ಮನಗಂಡ ಮೆಳವಂಕಿ ಗ್ರಾಮ ಪಂಚಾಯಿತಿ ಬೋಟ್ ಗಾಗಿ ಕಳೆದ ಎರಡು ತಿಂಗಳ ಹಿಂದೆ ತಾಲೂಕಾಡಳಿತಕ್ಕೆ ಬೇಡಿಕೆ ಇಟ್ಟಿತ್ತು.ಇದರಿಂದಾಗಿ ಈಗ ಬೋಟ್ ವ್ಯವಸ್ಥೆ ಮಾಡಲಾಗಿದೆ.