Breaking News

ಲಖನ್-ಕವಟಗಿಮಠ ಬೆಂಬಲಿಸಲು ಅಂಬಿರಾವ್ ಮನವಿ!!

Spread the love

ಲಖನ್-ಕವಟಗಿಮಠ ಬೆಂಬಲಿಸಲು ಅಂಬಿರಾವ್ ಮನವಿ!!

ಯುವ ಭಾರತ ಸುದ್ದಿ  ಗೋಕಾಕ: ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಬೆಂಬಲಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಇಟ್ಟುಕೊಂಡಿರುವ ಲಖನ್ ಹಾಗೂ ಕವಟಗಿಮಠ ಅವರ ಗೆಲುವು ಅಗತ್ಯವಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅಭಿಪ್ರಾಯಪಟ್ಟರು.
ಗೋಕಾಕ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿ ಮಾತನಾಡಿದ ಅವರು, ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು. ಕಾಂಗ್ರೆಸ್ ಸೋಲಿಸಲು ಎಲ್ಲರೂ ಮುಂದಾಗಬೇಕು. ಮತದಾರ ಬಂಧುಗಳು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಬಾರದು. ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲಬೇಕು. ಇಬ್ಬರನ್ನೂ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸಬೇಕಾದರೆ ಲಖನ್ ಮತ್ತು ಕವಟಗಿಮಠ ಗೆಲುವು ಅಗತ್ಯವಿದೆ. ಮೊದಲಿನಿಂದಲೂ ರಮೇಶ ಅವರನ್ನು ಆಶೀರ್ವದಿಸುತ್ತ ಬಂದಿರುವ ಇಲ್ಲಿಯ ಮತದಾರರು ಇನ್ನು ಮುಂದೆಯೂ ಸಹಕಾರ ನೀಡಿದರೆ ಜಿಲ್ಲೆಯ ಪ್ರಗತಿಗೆ ರಮೇಶ ಜಾರಕಿಹೊಳಿ ಅವರಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದರು.
ಗೋಕಾಕ ತಾಲೂಕಿನ ಗುಜನಾಳ, ತವಗ, ಮದವಾಲ, ಸುಲಧಾಳ, ಕುಂದರಗಿ, ಬೆಣಚಿಣಮರಡಿ(ಉ), ಮೇಲ್ಮಟ್ಟಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದರು.
ಮುಖಂಡರಾದ ಭೀಮಗೌಡ ಪಾಟೀಲ, ರಾಮಣ್ಣ ಸಿಂಬ್ಲಿ, ರುದ್ರಪ್ಪ ನಾಯಿಕ, ಅಡಿವೆಪ್ಪ ನಾವಲಗಟ್ಟಿ, ಬಾಳಪ್ಪ ಕಣವ್ವನ ಪೂಜೇರಿ, ಬೀರಪ್ಪ ಪೂಜೇರಿ ,ಮುನ್ನಾ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ಜೆನಕಟ್ಟಿ, ಆನಂದ ಬಾರಿಮನಿ, ಸುಶೀಲಾ ಕೆಂಪಣ್ಣವರ, ರಾಜಶ್ರಿ ಬಡೆವ್ವಗೋಳ, ಎನ್.ಬಿ. ಪಾಟೀಲ, ಮಹಾನಿಂಗವ್ವ ಮಲ್ಲೋಡಿ, ಉಪಾಧ್ಯಕ್ಷರಾದ ಮಹಾದೇವಿ ಕಳ್ಳಿಗುದ್ದಿ, ಕಸ್ತೂರಿ ಬಾದರವಾಡಿ, ಗಣಪತಿ ಮರಾಠೆ, ಮಲವ್ವ ಪುಡಭಂಗಿ, ಪ್ರೇಮಾ ಸನದಿ, ಶಂಕರ ಕುರಬೇಟ ಹಾಗೂ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …

Leave a Reply

Your email address will not be published. Required fields are marked *

9 − 2 =