ಗೋಕಾಕ: ಹಲ್ಯೆಗಳು ನಡೆದಿರುವ ಕಾರಣ ಅಹಲ್ಯೆಯಾದಳು ಎಂಬಂತೆ ಹೆಣ್ಣು ಕೇವಲ ಭೋಗದ ವಸ್ತು ವಲ್ಲ, ಅದೂ ಒಂದು ಸ್ವತಂತ್ರವಾದ ಜೀವ. ಅವಳ ಅಶ್ಮಿತೆಯೇ ಪುರುಷರ ಬದುಕಿಗೆ ಆಧಾರವಾಗಿದೆ ಹೀಗಾಗಿ ಹೆಣ್ಣಿಗೆ ಬೆಲೆ-ನೆಲೆಯಿದೆ ಎಂದು ಗೋಕಾದ ಭಾವಯಾನ ಸಾಹಿತ್ಯ ಸಂಘಟನೆ ಅಧ್ಯಕ್ಷೆ ಭಾರತಿ ಮದಭಾವಿ ಅಭಿಪ್ರಾಯ ಪಟ್ಟರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ -19 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ ಉಪನ್ಯಾಸ ಮಾಲಿಕೆ 14ನೇ ಗೋಷ್ಠಿಯಲ್ಲಿ ” ಗೋಕಾವಿ ನಾಡಿನ ಮಹಿಳಾ ಸಾಹಿತ್ಯ ಸಂವೇದನೆ” ವಿಷಯ ಕುರಿತು ಮಾತನಾಡುತ್ತಾ, ಈ ನಾಡಿನ ಮಹಿಳಾ ಸಾಹಿತಿಗಳು ಹೆಣ್ಣೆಂದರೆ ಖಳೆ, ಶಕ್ತಿ, ಕಾಮಿಣಿ, ಚಂಡಿ ಚಾಮುಂಡಿ, ಬಂಗಾರಿ, ಮಾಯಾಂಗಿಣಿ, ಪವಿತ್ರೆ ಅಷ್ಟೇ ಅಲ್ಲದೇ ಹೆಣ್ಣೆಂದರೆ ಮನುಕುಲದ ಬದುಕಿನ ಆದಿ ಅಂತ್ಯವಾಗಿ ಕಂಡಿದ್ದಾರೆ ಎಂದರು.
ಕಲಾವಿದ ಸಾಹಿತಿ ಜಯಾನಂದ ಮಾದರ ಸಂಘಟನೆ ಹಾಗೂ ಸಂಚಾಲಕತ್ವದಲ್ಲಿ ಮೂಡಿಬಂದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಆ ಓಣಿಯ ಕವಯತ್ರಿ-ಅನುವಾದಕಿ ಪ್ರಭಾವತಿ ಬೋರಗಾಂವಕರ ಮಾತನಾಡುತ್ತಾ, ಶತಶತಮಾನದಿಂದಲೂ ಶೋಷಣೆ ಯನ್ನು ಕಂಡ ಸ್ತ್ರೀಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈದು ಪುರುಷರ ಸಮಾನ ಸ್ಥಾನಮಾನ ಗಳಿಸಿಕೊಂಡಿರುವರು ಎಂದು ಹೇಳಿದರು.
ಗುರುವಾರದ ಈ ಉಪನ್ಯಾಸದಲ್ಲಿ ಲಕ್ಷ್ಮಣ್ ಚೌರಿ, ಸುರೇಶ್ ಹಣಗಂಡಿ, ಸುರೇಶ್ ಮುದ್ದಾರ, ಮಹಾನಂದ ಪಾಟೀಲ್, ಶಿವಲೀಲಾ ಪಾಟೀಲ್, ಈಶ್ವರಚಂದ್ರ ಬೆಟಗೇರಿ, ವಿನುತಾ ಕಾಮೋಜಿ, ವಿದ್ಯಾ ರೆಡ್ಡಿ, ಶಕುಂತಲಾ ದಂಡಗಿ, ರಮೇಶ್ ಮಿರ್ಜಿ, ಶಂಕರ ನಿಂಗನೂರ, ಈಶ್ವರ ಮಮದಾಪುರ, ಅರುಣ ಸವತಿಕಾಯಿ, ರಜನಿ ಜೀರಗಾಳ, ಬಾಲಶೇಖರ ಬಂದಿ, ಬಸವರಾಜ ಹಿರೇಮಠ ಮುಂತಾದವರು ಇದ್ದರು.