ದೇವರ ಹಿಪ್ಪರಗಿ : ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆರಿಂದ ಮನವಿ
ಯುವ ಭಾರತ ಸುದ್ದಿ ದೇವರ ಹಿಪ್ಪರಗಿ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಸಿ ಎ ಗುಡದಿನ್ನಿ ಅವರ ಮೂಲಕ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷ ವಿಜಯಶ್ರೀ ತೆಲ್ಲದ,ಗೌ.ಅ. ಜೆ.ಎಂ. ನಾಯ್ಕೋಡಿ ಮಾತನಾಡಿ, ಅಪೌಷ್ಟಿಕತೆ, ರಕ್ತ ಹೀನತೆ ಹಾಗೂ ಪ್ರಸವಪೂರ್ವ ಹಾಗೂ ನಂತರದ ಅಕಾಲಿಕ ಮರಣ ತಪ್ಪಿಸುವ ಸಲುವಾಗಿ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಸೇವೆಯಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಸುಮಾರು 46 ವರ್ಷಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ನೌಕರರು ಎಂದು ಪರಿಗಣಿಸದೆ ಸೇವಾ ಭದ್ರತೆ, ಪಿಂಚಣಿ, ಇ.ಎಸ್.ಐ ಹಾಗೂ ಭವಿಷ್ಯ ನಿಧಿಯಂತಹ ಸಾಮಾಜಿಕ ಭದ್ರತೆ ಸೌಲಭ್ಯವಿಲ್ಲದೆ ಶೋಷಣೆಗೊಳಗಾಗಿದ್ದೇವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗೌರವಧನ ಹೆಚ್ಚಸಿಲ್ಲ. ಕೂಡಲೇ ವೇತನ ಹೆಚ್ಚಳ ಮಾಡುವ ಜತೆಗೆ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯಾದ ಸರಸ್ವತಿ ಕೋಟ್ಯಾಳ, ಸಾವಿತ್ರಿ ಹೂಗಾರ, ಕಾರ್ಯಕಾರಣಿ ಸದಸ್ಯರಾದ ಗುರುಭಾಯಿ ರುದ್ರಗೌಡರ, ಸದಸ್ಯರಾದ ಸುನಂದ ಪಟ್ಟಣಶೆಟ್ಟಿ, ಆರ್ ಆರ್ ಸಿ ಗುತ್ತೇದಾರ ಹಾಗೂ ಎ.ಐ.ಟಿ.ಯು.ಸಿ ಅಧ್ಯಕ್ಷರು, ಪದಾಧಿಕಾರಿಗಳು,ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.