Breaking News

ಪ್ರವಾಹ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸಲು ಸೂಚಿಸಿದ- ಸಚಿವ ರಮೇಶ ಜಾರಕಿಹೊಳಿ.!!

Spread the love

ಪ್ರವಾಹ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸಲು ಸೂಚಿಸಿದ- ಸಚಿವ ರಮೇಶ ಜಾರಕಿಹೊಳಿ.!!

ಯುವ ಭಾರತ ಸುದ್ದಿ  ಗೋಕಾಕ: ಕಳೆದ ವರ್ಷದಷ್ಟು ಪ್ರವಾಹ ಈ ಬಾರಿ ಸಂಭವಿಸಿಲ್ಲ. ಕಳೆದ ಬಾರಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಸಿಎಮ್ ಜೊತೆಗೆ ಚರ್ಚೆ ಮಾಡಿದ್ದು, ತ್ವರಿತಗತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
   ಅವರು, ನಗರದ ತಾಪಂ ಸಭಾ ಭವನದಲ್ಲಿ ಜರುಗಿದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ನೆರೆಹಾವಳಿ ಹಾಗೂ ಕೋವಿಡ್ ೧೯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಬಾರಿ ಪ್ರವಾಹ ಕಡಿಮೆ ಸಂಭವಿಸಿದ್ದು, ಅತಿವೃಷ್ಟಿಯಿಂದಾಗಿ ರೈತರಿಗಾದ ಬೆಳೆ ಹಾನಿಯನ್ನು ಶೀಘ್ರ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
  ಕೋವಿಡ್ ೧೯ ಸೋಂಕಿತರನ್ನು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಅವಶ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಬೆಡ್ ಹಾಗೂ ಅಂಬ್ಯುಲೆನಸ್ ಒದಗಿಸಲು ಕ್ರಮಕೈಗೊಳ್ಳಬೇಕು. ಹಾಗೂ ಆದಷ್ಟು ಸೋಂಕಿತರಿ ರೋಗದ ಗುಣಲಕ್ಷಣಗಳು ಕಡಿಮೆ ಇದ್ದಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಿಕೊಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
  ಸೋಂಕಿತರ ಮನೆಯ ಸುತ್ತ ಸೀಲ್ ಡೌನ್ ಮಾಡುವದು ಹಾಗೂ ಫಲಕ ಅಳವಡಿಸುದನ್ನು ಕಟ್ಟುನಿಟ್ಟಾಗಿ ನಿರ್ಭಂಧಿಸಿದೆ. ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಹೊಗಳಿದ ಸಚಿವರು, ಸೋಂಕಿತರನ್ನು ಅಸ್ಪಶ್ಯರಂತೆ ಕಾಣದೇ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
     ತಾಲೂಕಿನ ಖನಗಾಂವ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತಿಚೇಗೆ ಆಹಾರ ಕಳ್ಳತನ ಮಾಡಿದ ಪ್ರಕರಣದಲ್ಲಿ, ಕಳ್ಳತನ ಮಾಡಿದ ಖಧಿಮರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
   ಇದೇ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಬಳ್ಳಾರಿ ನಾಲಾ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ 5ಲಕ್ಷ ರೂಪಾಯಿಗಳ ಪರಿಹಾರ ಧನ ಚೇಕನ್ನು ವಿತರಿಸಿದರು.
   ಸಭೆಯಲ್ಲಿ ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲದಾರ ದಿಲ್‌ಶಾದ್ ಮಹಾತ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯ್ಕ, ಡಿವೈಎಸ್‌ಪಿ ಮನೋಜಕುಮಾರ ನಾಯ್ಕ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

3 × 4 =