ಜಗದ್ಗುರು ಶ್ರೀ ಸಿದ್ಧಾರೂಢರ 190 ನೆಯ ಜಯಂತೋತ್ಸವ ಮತ್ತು ಜಗದ್ಗುರು ಶ್ರೀ ಗುರುನಾಥಾರೂಢರ 115ನೇ ಜಯಂತೋತ್ಸವ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತದ ಶತಮಾನೋತ್ಸವ ನಿಮಿತ್ಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದಲ್ಲಿ ದಿನಾಂಕ 20/2/25 ರಿಂದ 26/2/25 ರ ವರೆಗೆ ಹಮ್ಮಿಕೊಂಡಿರುವ ವಿಶ್ವ ವೇದಾಂತ್ ಪರಿಷತ್ತು ಕಾರ್ಯಕ್ರಮದ ಪ್ರಚಾರ ಹಾಗೂ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಶ್ರೀಸಿದ್ಧಾರೂಢ ಜ್ಯೋತಿಯಾತ್ರೆಯೂ ದಿನಾಂಕ 23.12.2024 ರಂದು ಶ್ರೀ ಸಿದ್ಧಾರೂಢರು ಜನಿಸಿದ ಪುಣ್ಯಭೂಮಿಯಾದ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಚಳಕಾಪೂರದಿಂದ ಪ್ರಾರಂಭವಾಗಿ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಪ್ರದೇಶ್ ಮತ್ತು ಗೋವಾ ರಾಜ್ಯಗಳಲ್ಲಿ ಸಂಚರಿಸಿ ದಿನಾಂಕ 21/1 2025 ರಂದು ಬೆಳಗಾವಿ ಮಹಾನಗರಕ್ಕೆ ಆಗಮಿಸಿ ಅಲ್ಲಿಂದ ಮಹಾರಾಷ್ಟ್ರದ ಕೆಲವು ಹಳ್ಳಿಗಳಲ್ಲಿ ಸಂಚರಿಸಿ ಅಲ್ಲಿಂದ ಹುಕ್ಕೇರಿ ಬೆನವಾಡ ಶಿರಗಾವ್ ಕೋಟಬಾಗಿ ಝಾ0ಗಟಿಹಾಳ ದಿಂದ ಘಟಪ್ರಭಾ ದುಪದಾಳ್ ಕೊಣ್ಣೂರ್ ಮರಡಿಮಠ ಗೋಕಾಕ್ ಫಾಲ್ಸ್ ಮೂಲಕ 24.01.205 ರಂದು 11 ಘಂಟೆಗೆ ಗೋಕಾಕ್ ನಗರದ ಬ್ಯಾಳಿಕಾಟ ಹತ್ತಿರ ಇರುವ ಶ್ರೀ ಹನುಮಂತ ದೇವರ ಮಂದಿರದಿಂದ ಮೆರವಣಿಗೆ ಮೂಲಕವಾಗಿ ಶ್ರೀ ಸಿದ್ಧಾರೂಢರ ಪರಮಶಿಷ್ಯರಾದ ಶಾಮಾನಂದ ಆಶ್ರಮಕ್ಕೆ ತಲುಪುವುದು ಅಲ್ಲಿಂದ ಮಾಲದಿನ್ನಿ ಉಪ್ಪಾರಟ್ಟಿ ಮಮದಾಪುರ್ ಶಿವಾಪುರ ಅಜ್ಜನಕಟ್ಟಿ ಪಂಚನಾಯಕನಹಟ್ಟಿ ಮಾರ್ಗವಾಗಿ ಬಂದು ಚಿಕ್ಕನಂದಿಯ ಶ್ರೀ ಸಿದ್ಧಾರೂಢ ಮಠದಿಂದ ಮೆರವಣಿಗೆ ಮೂಲಕವಾಗಿ ಗ್ರಾಮದಲ್ಲಿ ಸಂಚರಿಸಿ ಚಿಕ್ಕನಂದಿಯ ಶ್ರೀ ಸಿದ್ಧಾರೂಢ ದರ್ಶನ ಪೀಠದಲ್ಲಿ ವಾಸ್ತವ್ಯ ಮಾಡಿ ನಂತರ ಬೆಟಿಗೇರಿ ಕಂಡ್ರಟ್ಟಿ ಕಪರಟ್ಟಿ ಮಾರ್ಗವಾಗಿ ಹುಣಶ್ಯಾ ಪಿಜಿ ಕೈವಲ್ಯ ಆಶ್ರಮಕ್ಕೆ ತಲುಪುವುದು ಅಲ್ಲಿಂದ ಕಲ್ಲೋಳಿ ತುಕ್ಕಾನಟ್ಟಿ ಮಂಟೂರ್ ಮಾರ್ಗವಾಗಿ ಹಾರೂಗೇರಿ ಕಡೆಗೆ ಪ್ರಯಾಣ ಬೆಳೆಸಲಿದೆ ಆದಕಾರಣ ಎಲ್ಲ ಗ್ರಾಮಗಳ ಸದ್ಭಕ್ತರು ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿಯಾತ್ರೆಗೆ ಶ್ರದ್ಧಾಭಕ್ತಿಗಳಿಂದ ಸ್ವಾಗತಿಸಿ ಮೆರವಣಿಗೆಯಲ್ಲಿ ಭಾಗಿಗಳಾಗಿ ಕಲಿಯುಗದ ಕಾಮಧೇನು ಭಕ್ತರ ಭಾಗ್ಯದ ಭಗವಂತ ಜಾತ್ಯತೀತ ಜಗದ್ಗುರು ಶ್ರೀ ಸಿದ್ಧಾರೂಢರ ಕೃಪೆಗೆ ಪಾತ್ರರಾಗಬೇಕೆಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಹಾಗೂ ವಿಶ್ವ ವೇದಾಂತ ಪರಿಷತ್ತಿನ ಅಧ್ಯಕ್ಷರು ಮತ್ತು ಜ್ಯೋತಿಯಾತ್ರೆಯ ಕಾರ್ಯಧ್ಯಕ್ಷರಾದ ಶಾಮಾನಂದ ಬಾಳಪ್ಪ ಪೂಜೇರಿ ಇವರು ವಿನಂತಿಸಿಕೊಂಡಿರುತ್ತಾರೆ
Check Also
ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!
Spread the loveಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.! ಗೋಕಾಕ: ಪ್ರತಿಯೊಬ್ಬ ಮನುಷ್ಯನು ಸದ್ಗುಣ …