Breaking News

ಜೂನ್ ೩೦ರಿಂದ ಜುಲೈ ೮ರವರೆಗೆ ಗ್ರಾಮ ದೇವತೆಯರ ಜಾತ್ರೆ, ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಘೋಷಣೆ.!

Spread the love

 

 

 

 

 

 

ಜೂನ್ ೩೦ರಿಂದ ಜುಲೈ ೮ರವರೆಗೆ ಗ್ರಾಮ ದೇವತೆಯರ ಜಾತ್ರೆ, ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಘೋಷಣೆ.!

ಗೋಕಾಕ: ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವು ಜೂನ್ ೩೦ರಿಂದ ಜುಲೈ ೮ರವರೆಗೆ ೯ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ಜರುಗಲಿದೆ ಎಂದು ಶಾಸಕ ಹಾಗೂ ಜಾತ್ರಾ ಕಮೀಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ನಗರದ ಗುರುವಾರ ಪೇಠೆಯ ಶ್ರೀ ಲಕ್ಷಿö್ಮÃದೇವಿಯ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಪ್ರತಿ ಐದು ವರ್ಷಕ್ಕೊಮ್ಮೆ ಅತ್ಯಂತ ವಿಜೃಂಭಣೆಯಿAದ ಜರುಗುತ್ತಿದ್ದ ಗ್ರಾಮದೇವತೆಯರ ಜಾತ್ರೆ ಮಹಾಮಾರಿ ಕೋವಿಡ್ ಹಾಗೂ ದೇವಸ್ಥಾನಗಳ ನವಿಕರಣದ ಹಿನ್ನಲೆಯಲ್ಲಿ ಹತ್ತು ವರ್ಷಗಳ ಕಾಲ ಮುಂದುಡಲ್ಪಟ್ಟಿತ್ತು. ಈಗ ನವಿಕರಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು ಜಾತ್ರೆಯನ್ನು ಜೂನ್ ೩೦ರಿಂದ ಜುಲೈ ೮ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಜಾತ್ರೆಯನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಸಮುದಾಯದವರು ಸಂಘಟಿತರಾಗಿ ಭಕ್ತಿಭಾವದಿಂದ ಶಾಂತಿಯುತವಾಗಿ ಆಚರಿಸೋಣ. ಎಲ್ಲ ಇಲಾಖೆಯ ಅಧಿಕಾರಿಗಳು ಜಾತ್ರೆಯನ್ನು ಸುವ್ಯವಸ್ಥಿತವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಈ ಜಾತ್ರೆಯನ್ನು ಭಕ್ತಾಧಿಗಳು ಅತ್ಯಂತ ಶ್ರದ್ಧೆಯಿಂದ ಆಚರಿಸುವ ಮೂಲಕ ದೇವಿಯ ಅನುಗ್ರಹಕ್ಕೆ ನಾವೆಲ್ಲರೂ ಪಾತ್ರರಾಗೋಣವೆಂದು ಹೇಳಿದರು.
ಮುಖಂಡ ಅಶೋಕ ಪೂಜಾರಿ ಮಾತನಾಡಿ, ಗ್ರಾಮದೇವತೆಯರ ದೇವಸ್ಥಾನಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೆಚ್ಚಿನ ಆಸಕ್ತಿಯಿಂದ ಪ್ರಸಿದ್ಧ ದೇವಾಲಯಗಳಂತೆ ನವಿಕರಣಗೊಳಿಸಿದ್ದಾರೆ. ಭಕ್ತಿಯೊಂದಿಗೆ ಪ್ರೇಕ್ಷಣಿಯ ಸ್ಥಳವನ್ನಾಗಿ ಪರಿವರ್ತಿಸಿ ಜನರನ್ನು ಆಕರ್ಷಿಸಿದ್ದಾರೆ. ಜನತೆಯು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಜಾತ್ರಾ ಕಮೀಟಿಯ ಅಡಿವೆಪ್ಪ ಕಿತ್ತೂರ ಮಾತನಾಡಿ, ಗ್ರಾಮದೇವತೆಯರ ದೇವಸ್ಥಾನಗಳ ನವಿಕರಣ ಹಾಗೂ ನೂತನ ರಥ ನಿರ್ಮಾಣ ಕಾರ್ಯದಲ್ಲಿ ಜಾರಕಿಹೊಳಿ ಕುಟುಂಬದವರ ಪಾತ್ರ ಅಪಾರವಾಗಿದೆ. ಲಕ್ಷಿö್ಮÃ ದೇವಸ್ಥಾನದ ಆವರಣದಲ್ಲಿ ಜಾತ್ರಾ ಕಮೀಟಿಯೊಂದಿಗೆ ಸುಸಜ್ಜಿತ ಮಂಗಲ ಕಾರ್ಯಾಲಯ ನಿರ್ಮಿಸಿ ಜನತೆಗೆ ಅರ್ಪಿಸಿದ್ದಾರೆ. ಬರುವ ಜಾತ್ರೆಯಲ್ಲಿ ಕೆಮಿಕಲ್ ಮಿಶ್ರಿತ ಭಂಡಾರವನ್ನು ಬಳಸದಿರಿ. ಇಲಾಖೆಯಿಂದ ಅನುಮತಿ ಪಡೆದ ಅಂಗಡಿಗಳಿAದಲೇ ಭಂಡಾರ ಖರೀಧಿಸಿ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಾತ್ರೆಯನ್ನು ವಿಜೃಂಭಣೆಯಿAದ ಆಚರಿಸಲು ಜಾತ್ರಾ ಕಮೀಟಿಗೆ ಸಹಕಾರ ನೀಡುವಂತೆ ಕೋರಿದ ಅವರು, ಜಾತ್ರಾ ಸಂದರ್ಭದಲ್ಲಿ ನಗರದ ಎನ್‌ಎಸ್‌ಎಫ್ ಆವರಣದಲ್ಲಿ ೯ದಿನಗಳ ಕಾಲ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ ಎಂದರು.
ಜಾತ್ರಾ ಕಮೀಟಿಯ ನಿರಂಜನ ಬನ್ನಿಶೆಟ್ಟಿ ಮಾತನಾಡಿ, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ವಿವರಿಸುತ್ತ ಎಪ್ರೀಲ್ ೧ರಂದು ಮಧ್ಯಾಹ್ನ ೨ಗಂಟೆಗೆ ದೇವಿಯರನ್ನು ಬಣ್ಣಕ್ಕೆ ಕಳುಹಿಸಲಾಗುವದು. ಜೂನ್ ೩೦ರಂದು ದೇವಿಯರನ್ನು ಜೀನಗಾರ ಮನೆಯಿಂದ ಅಂಬಿಗೇರ ಓಣಿಯಲ್ಲಿ ಕೂಡ್ರಿಸುವದು. ಜುಲೈ ೧ರಂದು ಮುಂಜಾನೆಯಿAದ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ ಹಾಗೂ ರಾತ್ರಿ ಹೊನ್ನಾಟ ಜರುಗುವದು. ದಿ.೨ರಿಂದ ೪ರವರೆಗೆ ದೇವಿಯರ ರಥೋತ್ಸವ ನಡೆಯಲಿದೆ. ೫ರಿಂದ ೮ರವರೆಗೆ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ, ಆಟ ಮತ್ತು ಶರ್ತುಗಳು ಜರುಗಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿಯ ಪ್ರಭಾಕರ ಚೌಹಾನ, ಸಾಗೀರ ಕೋತವಾಲ, ದೇವರಾಜ ಪಾಟೀಲ, ಅಶೋಕ ಹೆಗ್ಗಣ್ಣವರ, ಅರ್ಜುನ ಪವಾರ, ದೇಶಪಾಂಡೆ ಹಾಗೂ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಅಶೋಕ ಪಾಟೀಲ, ರಾಜು ಮುನವಳ್ಳಿ, ಭೀಮಗೌಡ ಪೋಲಿಸಗೌಡರ, ತಹಶೀಲದಾರ ಡಾ. ಮೋಹನ ಭಸ್ಮೆ, ಡಿವೈಎಸ್‌ಪಿ ಡಿ ಎಚ್ ಮುಲ್ಲಾ, ಪೌರಾಯುಕ್ತ ರಮೇಶ ಜಾಧವ, ಪರಿಸರ ಅಭಿಯಂತ ಎಮ್ ಎಚ್ ಗಜಾಕೋಶ ಇದ್ದರು.
ಬಾಕ್ಸ ಐಟಂ
ನವೀಕರಣಗೊಂಡ ದೇವಸ್ಥಾನಗಳ ವಾಸ್ತು, ಮೂರ್ತಿ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಎಪ್ರೀಲ್ ೩೦ರಿಂದ ಮೇ೫ರ ವರೆಗೆ ಜರುಲಿವೆ. ದಿ.೩೦ರಂದು ಮುಂಜಾನೆ ಕೊಳವಿ ಹನುಮಾನ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ರಥ, ಕಲಶ, ದೇವಿಯರ ಮೂರ್ತಿ ಹಾಗೂ ಉಳಿದ ಉಪದೇವತೆಗಳ ಮೂರ್ತಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಶಿಖರ ಪೂಜೆ ನೆರವೇರಿಸಲಾಗುವದು. ದಿ.೧ರಂದು ಮುಂಜಾನೆ ಉಡುಪಿಯ ಉಚ್ಚಲ ಶ್ರೀ ಮಹಾಲಕ್ಷಿö್ಮÃ ದೇವಸ್ಥಾನದ ಶ್ರೀ ಮುಖ್ಯ ಆಚಾರ್ಯರು ಹಾಗೂ ಉಳಿದ ಆಚಾರ್ಯರಿಂದ ಗಣಪತಿ ಹೋಮ ಹಾಗೂ ಇತರೆ ಹೋಮ ಹವನಗಳು ನಡೆಯುತ್ತವೆ. ಸಾಯಂಕಾಲ ವಾಸ್ತು, ರಾಕ್ಷೌಗ್ನ ಹೋಮ ಹವನಗಳು ಜರುಗಲಿವೆ. ದಿ.೨ರಂದು ನವಗ್ರಹ ಯಾಗ, ನವಗ್ರಹ ಮೂರ್ತಿಪ್ರತಿಷ್ಠೆ, ಮೃತ್ಯುಂಜಯ ಹೋಮ ಹಾಗೂ ಗುರುವಾರ ಪೇಠೆಯ ಶ್ರೀ ಮಹಾಲಕ್ಷಿö್ಮÃ ದೇವಿಯ ಪ್ರತಿಷ್ಠಾ ಕಲಶ, ಬಿಂಬಶುದ್ಧಿ ನಡೆಯುತ್ತವೆ. ದಿ.೩ರಂದು ಅಶ್ವತ ಪ್ರತಿಷ್ಠೆ, ಶ್ರೀ ಆಂಜನೇಯ ಪ್ರಾಣ ಪ್ರತಿಷ್ಠೆ, ಕಲಶ ಹಾಗೂ ಸಾನಿಧ್ಯಯಾಗ, ಬಿಂಬಶುದ್ಧಿ ಹೋಮ ಹವನಗಳು ಜರುಗಲಿವೆ. ದಿ.೪ರಂದು ಅಷ್ಟಬಂದ ಲೇಪನ, ಗಣಪತಿ, ಮಹಾದೇವ, ನಾಗದೇವರು ಹಾಗೂ ಮೇರಣಕಟ್ಟೆ ಶ್ರೀ ಮಹಾಲಕ್ಷಿö್ಮÃದೇವಿ ಮೂರ್ತಿ ಪ್ರತಿಷ್ಠೆ ಮತ್ತು ಹೋಮ ಹವನಗಳು ನಡೆಯುತ್ತವೆ. ದಿ.೫ರಂದು ನಾಗದೇವರಿಗೆ ಕಲಶಾಭಿಷೇಕ, ಅಶ್ಲೇಷಬಲಿ, ಶ್ರೀ ಮಹಾದೇವರಿಗೆ ಕಲಶಾಭಿಷೇಕ ಹಾಗೂ ಮೃತ್ಯುಂಜಯ ಹೋಮಹವನಗಳು ಮತ್ತು ಸಾಯಂಕಾಲ ಗಣಪತಿ ದೇವರಿಗೆ ಕಲಶಾಧಿವಾಸ, ಭದ್ರಕಮಂಡಲ ಪೂಜೆ ಹೋಮ ಹವನಗಳು ನಡೆಯುತ್ತವೆ.


Spread the love

About Yuva Bharatha

Check Also

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಸ್ತಿತ್ವಕ್ಕೆ

Spread the love   ಬೆಳಗಾವಿ, ಫೆ.18 – ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು ಎಲ್ಲರೂ ಸೇರಿ ಬೆಳಗಾವಿ …

Leave a Reply

Your email address will not be published. Required fields are marked *

4 × one =