ಪ್ರೇರಣಾ ಪಿ.ಯು.ವಿದ್ಯಾರ್ಥಿಗಳ ಉತ್ತಮ ಸಾಧನೆ
ಯುವ ಭಾರತ ಸುದ್ದಿ ಬೆಳಗಾವಿ :
ನಗರದ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದ 2022 – 2023 ನೇ ಸಾಲಿನಲ್ಲಿ ದ್ವಿತೀಯ ಪಿ.ಯು ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.
ವಿಜ್ನಾನ ವಿಭಾಗದಲ್ಲಿ ಶೇಕಡಾ 100% ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 98% ರಷ್ಟು ಪಡೆದು ಗಣನೀಯ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಭಾರ್ಗವಿ ರಾಜಪುರೋಹಿತ 570 ಅಂಕಗಳನ್ನು ( 95% ) ಪಡೆದು ಪ್ರಥಮ ಸ್ಥಾನ, ಪ್ರಜ್ವಲಕುಮಾರ ತೋರಣಗಟ್ಟಿ 565 ಅಂಕಗಳು ( 94.1 %) ದ್ವಿತೀಯ ಸ್ಥಾನ, ಹಾಗೂ ಮನಸ್ವಿ ಸುತಾರ 554 ಅಂಕಗಳು ( 92.3%) ಪಡೆದು ತೃತೀಯ ಸ್ಥಾನವನ್ನು ಪಡೆದಿರುವರು.
ವಾಣಿಜ್ಯ ವಿಭಾಗದಲ್ಲಿ ತೆಹರಿನ್ ಸೈಯದ್ 577 ಅಂಕಗಳು ( 96%) ಪ್ರಥಮ ಸ್ಥಾನ, ತೇಜಸ್ವಿನಿ ಹಿರೇಮನಿ 572 ಅಂಕಗಳು (95.33%) ದ್ವಿತೀಯ ಸ್ಥಾನ, ಹಾಗೂ ಅಶಿತಾ ಪಾಟೀಲ 566 ಅಂಕಗಳು (94.33,%) ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚಿ ಪ್ರೇರಣಾ ಪಿ. ಯು. ಸಂಸ್ಥೆಯ ನಿರ್ದೇಶಕರಾದ ಗಿರೀಶ ದಂಡೆನ್ನವರ, ಅಮಿತ ವಾಗರಾಳಿ, ಪ್ರಾಚಾರ್ಯ ವೇಣುಗೋಪಾಲ ಹಾಗೂ ಸಮಸ್ತ ಉಪನ್ಯಾಸಕ ವೃಂದ,ಅಭಿನಂದನೆಗಳನ್ನು ಸಲ್ಲಿಸಿ, ಈ ಯಶಸ್ಸಿನ ಪಯಣ ಹೀಗೆ ಮುಂದುವರೆಯಿಲಿ ಎಂದು ಹಾರೈಸಿದ್ದಾರೆ.