ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ..!!
Yuva Bharatha
February 9, 2022
Uncategorized
347 Views
ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ..!!
ಯುವ ಭಾರತ ಸುದ್ದಿ ಗೋಕಾಕ್: ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿಯವರು ಘಟಪ್ರಭಾ ಪುರಸಭೆ ಅಭಿವೃದ್ಧಿಗೊಸ್ಕರ ಸತತ ಪ್ರಯತ್ನದಿಂದ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದರ ಪ್ರಯುಕ್ತ ಘಟಪ್ರಭಾ ಪುರಸಭೆ ಹಾಗೂ ಸದಸ್ಯರವತಿಯಿಂದ ಬುಧವಾರ ಸತ್ಕರಿಸಲಾಯಿತು.ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕರಾದ ರಮೇಶ ಜಾರಕಿಹೊಳಿಯವರು ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಗ್ರಾಮ ಪಂಚಾಯತಿಯನ್ನು ಸೇರಿಸಿ ಘಟಪ್ರಭಾ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸಮಗ್ರ ಘಟಪ್ರಭಾ ನಗರದ ಅಭಿವೃದ್ಧಿಗೋಸ್ಕರ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನವನ್ನು ಮಂಜೂರಿ ಮಾಡಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಿ.ಎಮ್ ದಳವಾಯಿ, ಮುಖ್ಯಾಧಿಕಾರಿಗಳಾದ ಕೆ.ಭೀ. ಪಾಟೀಲ, ಕಿರಿಯ ಅಭಿಯಂತರರಾರ ಎಮ್.ಎಸ್.ತೇಲಿ, ಸದಸ್ಯರಾದ ಮಾರುತಿ ಹುಕ್ಕೇರಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಮಲ್ಲಪ್ಪ ಕೋಳಿ, ನಾಗರಾಜ ಚಚಡಿ, ಈರಗೌಡ ಕಲಕುಟಗಿ, ಇಮ್ರಾನ ಬಟಕುರ್ಕಿ, ಕೆಂಪಣ್ಣಾ ಚೌಕಾಶಿ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶಿವಪುತ್ರ ಕೊಗನೂರ, ಸುನೀಲ ನಾಯಿಕ, ಲಕ್ಷ್ಮಣ ಮೇತ್ರಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.