ಗೋಕಾಕ: ತಾಲೂಕಿನ ೩೨ ಗ್ರಾಮ ಪಂಚಾಯತಗಳಲ್ಲಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಭಾಜಪ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ.
ಬೆಳಿಗ್ಗೆ ೮ ಗಂಟೆಯಿAದ ಮತ ಎಣಿಕ ಪ್ರಾರಂಭವಾಗಿದ್ದು, ಕೆಲವು ಗ್ರಾಮ ಪಂಚಾಯತಗಳಲ್ಲಿ ಅಭ್ಯರ್ಥಿಗಳ ಸಮವಾಗಿ ಮತ ಪಡೆದಿದ್ದರಿಂದ ಮರಳಿ ಮತ ಎಣಿಕೆ ಮಾಡಲಾಯಿತು. ಇನ್ನೂ ಕೆಲವು ಮತ ಎಣಿಕೆ ಕೋಠಡಿಗಳಲ್ಲಿ ಅಭ್ಯರ್ಥಿಗಳ ಎಜೇಂಟರ ಹಾಗೂ ಮತ ಎಣಿಕೆ ಅಧಿಕಾರಿಗಳ ನಡುವೆ ವಾಗ್ವಾದ ಜರುಗಿತು.
ಅಭ್ಯರ್ಥಿಗಳ, ಎಜೇಂಟರ ನಡುವೆ ನಡೆದ ವಾಗ್ವಾದದ ಹಿನ್ನೆಲೆ ಮತ ಎಣಿಕೆಗೆ ವಿಳಂಬವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಮತ ಎಣಿಕೆ ಕೇಂದ್ರದ ಸುತ್ತ ಮುತ್ತಲೂ ಸೂಕ್ತ ಪೋಲಿಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ಹಲವು ಮತ ಎಣಿಕೆ ಕೇಂದ್ರಗಳಲ್ಲಿ ಶಾಂತಿಯುತ ಮತ ಎಣಿಕೆ ನಡೆದಿದೆ.
ವಿಜೇತ ಅಭ್ಯರ್ಥಿಗಳು ಸಚಿವ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ಪಕ್ಷಕ್ಕೆ ಜೈಯ ಘೋಷ ಹಾಕುತ್ತ ಬಿಜೆಪಿಗೆ ಬೆಂಬಲ ಸೂಚಿಸಿ, ಗುಲಾಲು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಎಣಿಕೆ ಕೇಂದ್ರದತ್ತ ಆಗಮಿಸಿರುವ ಜನರು ಯಾವುದೇ ಮಾಸ್ಕ್, ಸಾಮಾಜಿಕ ಅಂತರ ಇಲ್ಲದಾಗಿದೆ. ಯಾವುದೇ ರೀತಿ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸದೆ ಇರುವ ದೃಶ್ಯಗಳು ಕಂಡು ಬರುತ್ತಿದೆ.
ರಾಜ್ಯದಲ್ಲಿ ರೂಪಾಂತರ ಕೊರೊನಾ ಪತ್ತೆಯಾಗಿವೆ. ಹೀಗಿದ್ದರು ಸಹ ಮತಗಟ್ಟೆ ಕೇಂದ್ರದತ್ತ ಆಗಮಿಸಿದ ಜನರು ಮೈ ಮರೆತು, ಫಲಿತಾಂಶಕ್ಕೆ ಕಾದು ನಿಂತಿದ್ದಾರೆ. ಕೊರೊನಾ ಇದೆಯೇ ಎಂಬುವುದು ಸಹ ಅವರ ಗಮನದಲ್ಲಿ ಇಲ್ಲದಾಗಿದೆ. ಇನ್ನೂ ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕಾದಂತ ಪೊಲೀಸ್ ರು ತಮಗೂ ಅದಕ್ಕೂ ಸಂಬAಧವಿಲ್ಲ ಎಂಬAತೆ ಇದ್ದಾರೆ.
ಗುಜನಾಳ ಗ್ರಾಪಂದಿAದ ಭೀಮಗೌಡ ಪೋಲಿಸಗೌಡರ, ಮಾಲದಿನ್ನಿ ಗ್ರಾಪಂದಿAದ ಹನಮಂತ ದುರ್ಗನ್ನವರ, ಮಮದಾಪೂರ ಗ್ರಾಪಂದಿAದ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಇನ್ನುಳಿ ಗ್ರಾಮ ಪಂಚಾಯತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವಿನ ನಗೆ ಬಿರುತ್ತ, ಸಚಿವರ ಗೃಹ ಕಚೇರಿಗೆ ಆಗಮಿಸಿ, ಸಂಭ್ರಮಾಚರಣೆ ನಡೆಸಿದರು.