ಸ್ವರ್ಗದ ಬಾಗಿಲು ತೆರೆಯಲು ಭರ್ಜರಿ ತಯಾರಿ

ಬೆಂಗಳೂರು : ಪುಷ್ಯ ಮಾಸದ ಶುಕ್ಷ ಪಕ್ಷ ಸೋಮವಾರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ರಾಜ್ಯದ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ಪೂಜಾ ಕೈಂಕರ್ಯಕ್ಕೆ ಸಜ್ಜಾಗುತ್ತಿವೆ. ಅಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವುದು ಭಕ್ತರ ನಂಬಿಕೆ. ಆದ್ದರಿಂದ ಬೆಳ್ಳಂಬೆಳಗ್ಗೆ ದೇವಾಲಯದ ಉತ್ತರ ದ್ವಾರದ ಬಳಿ ಭಕ್ತರು ದರ್ಶನಕ್ಕಾಗಿ ಕಾದಿರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರು ಇದೇ ದ್ವಾರದ ಮೂಲಕ ಹೊರ ಬರುತ್ತಾರೆ. ಈ ಕಾರಣಕ್ಕಾಗಿ ವೈಕುಂಠ ದ್ವಾರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
YuvaBharataha Latest Kannada News