ಗೃಹಜ್ಯೋತಿ ನೋಂದಣಿ 18 ರಿಂದ
ಬೆಂಗಳೂರು:
ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’ ಯೋಜನೆಯ ನೋಂದಣಿ ಜೂನ್ 18ರಿಂದ ಆರಂಭವಾಗಲಿದೆ.
ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು ವಿಶೇಷವಾಗಿ ಸೃಜಿಸಲಾಗಿರುವ ಸೇವಾ ಸಿಂಧು ರ್ಟಲ್‌ನಲ್ಲಿ (https://sevasindhugs.karnataka.gov.in/gruhajyothi) ನೋಂದಾಯಿಸಬೇಕು. ಈ ತಂತ್ರಾಂಶವನ್ನು ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟ್ಯಾಪ್‌ನಲ್ಲಿಯೂ ಬಳಸಬಹುದಾಗಿದೆ.
ಫಲಾನುಭವಿಗಳು ಆಧಾರ್ ಕಾರ್ಡ್, ವಿದ್ಯುತ್ ಖಾತೆ ಸಂಖ್ಯೆಯ ಮಾಹಿತಿಯನ್ನು (ವಿದ್ಯುತ್ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕು. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ಎಸ್ಕಾಂಗಳ ಸ್ಥಳೀಯ ಕಚೇರಿಗಳಲ್ಲಿಯೂ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಎಸ್ಕಾಂಗಳ ಸ್ಥಳೀಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 24×7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ವರೆಗಿನ ಬಳಕೆಯ ಮಿತಿಯಲ್ಲಿ, ಗ್ರಾಹಕರು ಮಾಸಿಕ ಸರಾಸರಿ ಬಳಸಿದ (2022-23ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ 10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ. ರಾಜ್ಯದ 2.14 ಕೋಟಿ ಗೃಹ ಬಳಕೆ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ. ಆಗಸ್ಟ್1ರಿಂದ (ಜುಲೈ ತಿಂಗಳ ಬಿಲ್) ಯೋಜನೆ ಜಾರಿಗೆ ಬರಲಿದೆ.