ಕನ್ನಡ ಬಳಸುತ್ತಾ ಬೆಳೆಸಿರಿ ಬಿ.ಎಸ್.ಗವಿಮಠ
ಯುವ ಭಾರತ ಸುದ್ದಿ ಬೆಳಗಾವಿ :ಹಾಡಿ ಹಾಡಿ ರಾಗ ಬಂತು, ಉಗುಳಿ ಉಗುಳಿ ರೋಗ ಬಂತು ಎನ್ನುವಂತೆ ಕನ್ನಡ ಭಾಷೆಯನ್ನು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಸುತ್ತ ಉಳಿಸಿ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಹೇಳಿದರು.
ಹುಕ್ಕೇರಿ ತಾಲೂಕಿನ ಕರಗುಪ್ಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಲಿಂ.ದುಂಡವ್ವ ಗವಿಮಠ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ರಾಜಶೇಖರ ಉಚ್ಚಂಗಿ ಮಾತನಾಡಿ, ತಾಯಿ, ತಾಯಿ ಭಾಷೆ, ಕನ್ನಡ ಸಾಹಿತ್ಯ- ಸಂಸ್ಕೃತಿ ಕುರಿತು ಮಾತನಾಡಿದರು.
ಶಂಕರಯ್ಯ ಮಠದ ವೇ. ಚಂದ್ರಯ್ಯ ಸ್ವಾಮಿಗಳು ಹಾಗೂ ಪಾಶ್ಚಾಪುರ ಉಜ್ಜೇಶ್ವರ ಮಠದ ಪೂಜ್ಯ ವಿಶ್ವಾರಾಧ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹುಕ್ಕೇರಿ ತಾಲೂಕಿನ 2022 ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಶಿರಗಾಂವ ಮತ್ತು ಕೊಚೇರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರು. ಗುರುಸಿದ್ಧ ಪಾಯನ್ನವರ, ಮಲಗೌಡ ಪಾಟೀಲ, ಶಂಕ್ರಯ್ಯ ಗವಿಮಠ, ಶಶಿಧರ ಗವಿಮಠ, ಸಾಹಿತಿ ಬಸವರಾಜ ಗಾರ್ಗಿ, ಶಿಕ್ಷಕರಾದ ಬಸವಣ್ಣಿ ಖಜೂರಿ, ಭೂಮಣ್ಣವರ, ಮಾಳಗಿ, ಮುಖ್ಯೋಪಾಧ್ಯಾಯ ಅಶೋಕ ಮುನ್ನೊಳ್ಳಿ, ಸಂಯೋಜಕ ಪ್ರೊ.ಎಲ್. ವಿ ಪಾಟೀಲ, ಶಿವಾನಂದ ಗುಂಡಾಳಿ, ಕಸಾಪ ಪದಾಧಿಕಾರಿಗಳು, ಎಸ್.ಎಂ. ಶಿರೂರ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಸ್ವಾಗತಿಸಿದರು. ಭೂಮಣ್ಣ ವಂದಿಸಿದರು.