ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗುರುಸ್ವಾಮಿಗಳು, ಮಾಲಾಧಾರಿಗಳು
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ವ್ರತ ಮಂಗಳವಾರ ಸಂಪೂರ್ಣಗೊಂಡಿರುವದರಿಂದ ಇಲ್ಲಿಯ ಮಾಲಾಧಾರಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದಲ್ಲಿ ಅದ್ದೂರಿಯಿಂದ ಮೆರವಣಿಗೆ ನಡೆಸಿದರು.
ಅರ್ಚಕರಾದ ಶರಣ ಸ್ವಾಮೀ, ಗುರುಸ್ವಾಮೀಗಳಾದ ಮಲ್ಲಿಕಾರ್ಜುನ ಹಣಜಿ ಹಾಗೂ ಅಶೋಕ ಲಗಮಾಪೂರ, ರೆಡ್ಡಿ ಸ್ವಾಮೀಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯೂ ನೋಡುಗರರನ್ನು ಭಕ್ತಿ ಇಮ್ಮಡಿಗೊಳಿಸಿತು. ವಿವಿಧ ವಾಧ್ಯ ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೋಂಡವು.
ನವೆಂಬರ್ 16 ರಂದು ಶ್ರೀ ಅಯ್ಯಪ್ಪ ಸ್ವಾಮೀಯ ಮಾಲಾಧಾರಣೆ ಆರಂಭಗೊಂಡು 41 ದಿನಗಳ ಕಾಲದ ಮಂಡಲ ವೃತ ಆರಂಭಗೊಂಡು ಡಿಸೆಂಬರ್ 27 ರಂದು ಮಂಗಳವಾರ ವೃತ ಅಂತಿಮಗೊಂಡಿತು.
ಮೆರವಣಿಗೆ ಮೊದಲು ಪಟ್ಟಣದ ವಿದ್ಯಾಗಿರಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ, ವಿಘ್ನೆಶ್ವರ, ಮೂಕಾಂಬಿಕೆ, ಸುಬ್ರಮಣ್ಯ ಸ್ವಾಮಿ ಸೇರಿದಂತೆ ನವಗ್ರಹ ಹಾಗೂ ಧ್ವಜಸ್ಥಂಬಗಳಿಗೆ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಬಸವರಾಜ ಮಂಗಳಗಟ್ಟಿ, ಬಸವರಾಜ ಸಂಗೊಳ್ಳಿ, ಮಂಜುನಾಥ ಮುರಗೋಡ, ಪುಟ್ಟಲಿಂಗ ಸ್ವಾಮಿ, ತುಕಾರಾಮ್ ತಳವಾರ, ಜ್ನಾನೇಶ ಕೋಳೆಕರ್, ಮಾಲಾಧಾರಿಗಳಾದ ಸೋಮಶೇಖರ ಕುಪ್ಪಸಗೌಡರ, ಶ್ರೀಶೈಲ ಪಾಟೀಲ, ಮಂಜುನಾಥ ಮಣವಡ್ಡರ, ಕೆಂಚಪ್ಪ ಸ್ವಾಮಿ, ಪ್ರಮೋದ ಸ್ವಾಮಿ, ಸೇರಿದಂತೆ ಎಲ್ಲ ಮಾಲಾಧಾರಿಗಳು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
“ಹೊಸ ವರ್ಷ ಜನೇವರಿ 01 ರಂದು ರವಿವಾರ ಪಟ್ಟಣದ ವಿದ್ಯಾಗಿರಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮೀಯ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆ ಹಾಗೂ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದ್ದು ಅಯ್ಯಪ್ಪ ಸ್ವಾಮೀ ಭಕ್ತಾಧಿಗಳು ಹಾಗೂ ಮಾಲಾಧಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಅಯ್ಯಪ್ಪ ಸ್ವಾಮಿಯ ಕೃಪಾರ್ಶಿವಾದ ಪಡೆಯಬೇಕೆಂದು ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಟ್ರಸ್ಟ ಕಮೀಟಿ ಅಧ್ಯಕ್ಷ ವಿಷ್ಣು ಕಲಾಲ ಹಾಗೂ ಕಮೀಟಿ ಸದಸ್ಯರು ತಿಳಿಸಿದ್ದಾರೆ”