ಪುತ್ತಿಗೆ ಶ್ರೀಗಳಿಗೆ ಹನುಮ ದರ್ಶನ !

ಉಡುಪಿ :
ಒಡಿಸ್ಸಾ ರಾಜ್ಯದ ಭುವನೇಶ್ವರದ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ್ದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಹನುಮ ದರ್ಶನವಾಗಿದೆ !
ಭುವನೇಶ್ವರದ ಪ್ರಸಿದ್ದ ಇಸ್ಕಾನ್ ದೇವಾಲಯಕ್ಕೆ ಸ್ವಾಮೀಜಿ ಭೇಟಿ ನೀಡಿದ್ದರು. ಆಗ ಕೋತಿ ದರ್ಶನ ಆಗಿದೆ.
ತಮಗೆ ಸಾಕ್ಷಾತ್ ಹನುಮಾನ್ ಆಶೀರ್ವಾದ ಮಾಡಲು ಬಂದಂತಾಯಿತು ಎಂದು ಅವರು ಹೇಳಿದ್ದಾರೆ.
ತಮ್ಮ ಪಟ್ಟ ಶಿಷ್ಯ ಸುಶೀಂದ್ರ ತೀರ್ಥ ಸ್ವಾಮೀಜಿ ಅವರೊಂದಿಗೆ ಇಸ್ಕಾನ್ ದೇವಾಲಯದಲ್ಲಿ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ನೀಡುತ್ತಿದ್ದರು. ಆಗ ಬಂದ ಹನುಮಾನ್ ಲಂಗೂರ್ ಪ್ರಭೇದದ ಕೋತಿ ನೇರವಾಗಿ ಶ್ರೀಗಳ ಮುಂದಿದ್ದ ಮೇಜು ಹತ್ತಿ ಶ್ರೀಗಳನ್ನು ನೋಡತೊಡಗಿದೆ. ಶ್ರೀಗಳು ಆಗ ಕೈಯಲ್ಲಿದ್ದ ಮೈಕ್ ನಲ್ಲಿ ನಮಗೆ ಶ್ರೀಕೃಷ್ಣನ ಆಶೀರ್ವಾದ ಜೊತೆಗೆ ಹನುಮಾನ್ ಆಶೀರ್ವಾದ ದೊರೆಯುತ್ತದೆ ಎಂದು ಹೇಳಿದರು!
ನಂತರ ಶ್ರೀಗಳು ಕೋತಿಗೆ ಬಾಳೆಹಣ್ಣು ನೀಡಿದರು. ಆಗ ಅದು ಅಲ್ಲಿಂದ ಹೊರಗೆ ಹಾರಿತು. ಈ ವಿಡಿಯೋ ವೈರಲ್ ಆಗಿದೆ. ಹನುಮಾನ್ ದೇವರೇ ದರ್ಶನ ನೀಡಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ.
YuvaBharataha Latest Kannada News