ಹಿರೇಬೂದನೂರ : ಬಾಳುಮಾಮಾ ಜಾತ್ರೆ
ಸಮಾರೋಪ
ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀಸದ್ಗುರುಸಂತಬಾಳು
ಮಾಮಾ ಜಾತ್ರೆ ಸಡಗರದಿಂದ ಸಮಾರೋಪಗೊಂಡಿತು.
ಜಾತ್ರೆ ನಿಮಿತ್ತ ವಿಶೇಷ ಪೂಜೆ, ನಾಮಜಪ, ಡೊಳ್ಳಿನ ವಾಲಗ,
ಮಹಾ ರುದ್ರಾಭಿಷೇಕ, ಮಂತ್ರಪಠಣ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ, ಕುಂಭ ಮೇಳ, ಡೊಳ್ಳು ಕುಣಿತ, ಭಂಡಾರ ಎರಚಾಟ, ಡೊಳ್ಳಿನ ಪದ, ಟಗರಿನ ಕಾಳಗ, ಮಹಾಪ್ರಸಾದ ವಿತರಣೆ,ಸೇವೆಸಲ್ಲಿಸಿದ ಭಕ್ತರ ಸನ್ಮಾನ ಸೇರಿದಂತೆ ನಾನಾಧಾರ್ಮಿಕ ಹಾಗೂಮನರಂಜನಾ ಕಾರ್ಯಕ್ರಮ ಜರುಗಿದವು.
ತವಗ ಮಠದ ಶ್ರೀ ಬಾಳಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಪ್ರಗತಿಪರ ರೈತ ಮುಖಂಡ ನಾಗರಾಜ ದೇಸಾಯಿ ಅಧ್ಯಕ್ಷತೆ
ವಹಿಸಿದ್ದರು. ವೀರಪ್ಪ ಉಣ್ಣಿ, ರಾಯಪ್ಪಹುಣಸಿಕಟ್ಟಿ,ಸೋಮಪ್ಪಮಳಗಲಿ ನೇತೃತ್ವ ವಹಿಸಿದ್ದರು.
ಪಿಡಿಒ ಜಿ.ಎಂ. ಗಿರೆನ್ನವರ,ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಸೂರಣ್ಣವರ, ಗ್ರಾ.ಪಂ. ಸದಸ್ಯೆ ಮಂಜುಳಾ ನಾಯ್ಕರ, ಯಲ್ಲಪ್ಪ ನಾಯ್ಕರ,ಮೋಹನಗೌಡ ಪಾಟೀಲ,ಶಂಕ್ರೆಪ್ಪಸೂರಣ್ಣವರ, ಯಲ್ಲಪ್ಪ ತಳವಾರ,ಸಿದ್ದನಾಯ್ಕಪ್ಪ
ಹುರಕನವರ, ಬಾಳೇಶಸೂರಣ್ಣವರ,ಬಸನಗೌಡ ಗೌಡತಿ, ಶಂಕ್ರೆಪ್ಪ ನಾಯಕ, ನಾಗಪ್ಪ ಮಿಜ್ಜಿ, ಬೀರಪ್ಪ ಸೂರಣ್ಣವರ, ನಾಗಪ್ಪ ಬಸಟ್ಟಿ, ಈರಪ್ಪ ಗೊಡಚಿ, ಹಿರೇಬೂದನೂರ, ವಣ್ಣೂರ
ಹಾಗೂ ಚಿಕ್ಕಬೂದನೂರ, ಕುಟರನಟ್ಟಿ, ಓಬಲದಿನ್ನಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.