ಶ್ರೀ ಶಂಕರಾಚಾರ್ಯ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸ್ತೋತ್ರ ಪಠಣ ಸ್ಪರ್ಧೆ

ಯುವ ಭಾರತ ಸುದ್ದಿ ಬೆಳಗಾವಿ :
ಶ್ರೀಮದಾದ್ಯ ಜಗದ್ಗುರು ಶಂಕರಾಚಾರ್ಯ ಜಯಂತಿ ಉತ್ಸವ ಪ್ರಯುಕ್ತ ಸ್ತೋತ್ರ ಪಠಣ ಸ್ಪರ್ಧೆ ಏಪ್ರಿಲ್ 23 ರಂದು ಚಿದಂಬರ ನಗರ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಏಪ್ರಿಲ್ 23 ರಂದು ಸಂಜೆ 4:00 ಶ್ರೀಮದಾದ್ಯಜಗದ್ಗುರು ಶಂಕರಾಚಾರ್ಯ ಕೃತ ಸ್ತೋತ್ರ ಪಠಣ ಕಂಠಪಾಠ ಅಥವಾ ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ. ಬಾಲವಾಡಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಮಾಹಿತಿಗೆ ಸಂಜೀವ ಕುಲಕರ್ಣಿ ಮೊಬೈಲ್ ಸಂಖ್ಯೆ 94 49 52 93 93 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.
YuvaBharataha Latest Kannada News