Breaking News

ಆರ್‌ಎಸ್‌ಎಸ್‌ ವ್ಯಕ್ತಿ ಪರ ಪ್ರಚಾರ ಮಾಡುತ್ತೀರೆಂದು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ; ಶೆಟ್ಟರ ಪರ ಪ್ರಚಾರಕ್ಕೆ ಸೋನಿಯಾ ಗಾಂಧಿ ವಿರುದ್ಧ ಓವೈಸಿ ವಾಗ್ದಾಳಿ

Spread the love

ಆರ್‌ಎಸ್‌ಎಸ್‌ ವ್ಯಕ್ತಿ ಪರ ಪ್ರಚಾರ ಮಾಡುತ್ತೀರೆಂದು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ; ಶೆಟ್ಟರ ಪರ ಪ್ರಚಾರಕ್ಕೆ ಸೋನಿಯಾ ಗಾಂಧಿ ವಿರುದ್ಧ ಓವೈಸಿ ವಾಗ್ದಾಳಿ

ಯುವ ಭಾರತ ಸುದ್ದಿ ಹುಬ್ಬಳ್ಳಿ:
ಇತ್ತೀಚೆಗಷ್ಟೇ ಬಿಜೆಪಿ ಹೊರಬಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಹುಬ್ಬಳ್ಳಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಅವರು, ಜಗದೀಶ್ ಶೆಟ್ಟರ ಅವರನ್ನು ಆರ್‌ಎಸ್‌ಎಸ್‌ನ ವ್ಯಕ್ತಿ ಎಂದು ಕರೆದಿರುವ ಸೋನಿಯಾ ಗಾಂಧಿ ಈಗ ಅವರ ಪರವೇ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಜಗದೀಶ ಶೆಟ್ಟರ ಕಳೆದ ತಿಂಗಳು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಮೇಡಂ ಸೋನಿಯಾ ಗಾಂಧಿಜೀ, ನೀವು ಆರ್‌ಎಸ್‌ಎಸ್‌ನ ಪರ ಪ್ರಚಾರ ಮಾಡುತ್ತೀರಿ ಎಂದು ನಾನು ನಿರೀಕ್ಷಿಸಿರಲಿಲ್ಲ. ಜಗದೀಶ ಶೆಟ್ಟರ ಆರ್‌ಎಸ್‌ಎಸ್‌ನಿಂದ ಬಂದವರು. ದುರದೃಷ್ಟವಶಾತ್, ಕಾಂಗ್ರೆಸ್ ಸೈದ್ಧಾಂತಿಕ ಯುದ್ಧದಲ್ಲಿ ಸೋತಿದೆ. ಇದು ಜಾತ್ಯತೀತತೆಗಾಗಿ ನಿಮ್ಮ ಹೋರಾಟವೇ? ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ವಿರುದ್ಧ ನೀವು ಹೀಗೆಯೇ ಹೋರಾಡುತ್ತೀರಾ ಓವೈಸಿ ಪ್ರಶ್ನಿಸಿದರು.

ಸೋನಿಯಾ ಗಾಂಧಿ ಅವರ ಜೊತೆ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜಗದೀಶ ಶೆಟ್ಟರ ವೇದಿಕೆಯಲ್ಲಿದ್ದರು. ಸೋನಿಯಾ ಗಾಂಧಿ ಮೂರು ವರ್ಷಗಳ ನಂತರ ತಮ್ಮ ಮೊದಲ ರ್ಯಾಲಿಯನ್ನು ನಡೆಸಿದರು.

ಶನಿವಾರ, ಕರ್ನಾಟಕದಲ್ಲಿ ತನ್ನ ಮೊದಲ ಚುನಾವಣಾ ರ್ಯಾಲಿಯಲ್ಲಿ, ಸೋನಿಯಾ ಗಾಂಧಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದರು. ಬಿಜೆಪಿಯ ಲೂಟಿ ಮತ್ತು ದ್ವೇಷದ ವಾತಾವರಣವನ್ನು ಕೊನೆಗೊಳಿಸದೆ ಕರ್ನಾಟಕ ಅಥವಾ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ ಮತ್ತು ಬಿಜೆಪಿಯ ಮಹೇಶ್ ಟೆಂಗಿನಕಾಯಿ ನಡುವಿನ ಹಣಾಹಣಿಯು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠಿತ ಕದನವಾಗಿ ಪರಿಣಮಿಸಿದೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

15 − six =