ಸ್ಕರ್ಟ್, ಶಾರ್ಟ್ಸ್ ಹಾಕಿದ್ರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ
ಮುಂಬೈ :
18 ಪ್ರಸಿದ್ಧ ದೇವಸ್ಥಾನದಲ್ಲಿ ಇದೀಗ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ಈ ರೀತಿಯ ಉಡುಪುಗಳಿಗೆ ನಿಷೇಧ ಹೇರಲಾಗಿದೆ.
ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆ ಈ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಮಹಾರಾಷ್ಟ್ರದ 18 ದೇವಸ್ಥಾನಗಳಲ್ಲಿ ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ಪ್ರವೇಶಿಸುವಂತಿಲ್ಲ. ಇಂತಹ ಉಡುಪುಗಳಿಗೆ ನಿಷೇಧ ಹೇರಲಾಗಿದೆ.
ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಘಟಕ ಜಂಟಿಯಾಗಿ ಮಹತ್ವದ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ಶೀಘ್ರದಲ್ಲೇ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಾದ ಶಿರಡಿ ಸೇರಿದಂತೆ ಇತರ ಪ್ರಸಿದ್ಧ ಮಂದಿರಗಳಲ್ಲೂ ಡ್ರೇಸ್ ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದೆ. ಇತ್ತ ಸರ್ಕಾರ ಕೂಡ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ.