ಹೆಂಡ್ತಿಗೆ ಟಿಕೆಟ್ ಕೊಡದಿದ್ದರೆ ನನಗೂ ಟಿಕೆಟ್ ಕೊಡಬೇಡಿ ಎಂದ ಪತಿ !

ಯುವ ಭಾರತ ಸುದ್ದಿ ಹಾಸನ:
ಪತ್ನಿ ಭವಾನಿ ಅವರಿಗೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡದಿದ್ದರೆ, ಹೊಳೆನರಸೀಪುರ ದಿಂದ ನನಗೂ ಟಿಕೆಟ್ ಬೇಡ ಎಂಬ ಸಂದೇಶವನ್ನು ಶಾಸಕ ಎಚ್.ಡಿ. ರೇವಣ್ಣ ರವಾನಿಸಿದ್ದಾರೆ.
ಶುಕ್ರವಾರ ರಾತ್ರಿ ಆಪ್ತರು ಹಾಗೂ ಮುಖಂಡರೊಂದಿಗೆ ಇಲ್ಲಿನ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಅವರು ಮಂಡಿಸಿದ ವಾದಕ್ಕೆ ಬಹುತೇಕ ಮುಖಂಡರೂ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಭವಾನಿ ಪಟ್ಟು ಸಡಿಲಿಸುತ್ತಿಲ್ಲ. ಪುತ್ರರು ತಾಯಿಯನ್ನು ಹಾಸನದಿಂದ ಕಣಕ್ಕಿಳಿಸಲೇಬೇಕೆಂದು ಹಟ ತೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೊನೆಯ ಅಸ್ತ್ರವಾಗಿ ನನಗೆ ಹೊಳೆನರಸೀಪುರ ಟಿಕೆಟ್ ಬೇಡ ಎಂಬ ದಾಳವನ್ನು ರೇವಣ್ಣ ಉರುಳಿಸಿದ್ದಾರೆ.
ಹಾಸನ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಹೊಳೆನರಸೀಪುರದಲ್ಲಿ ಗೆದ್ದು ಏನು ಮಾಡುವುದು? ನನಗೂ ಅಲ್ಲಿನ ಟಿಕೆಟ್ ಬೇಡ. ಈ ಬಗ್ಗೆ ದೇವೇಗೌಡರಿಗೆ ಸಂದೇಶ ರವಾನಿಸುವೆ ಎಂದು ತಿಳಿಸಿದ್ದಾರೆ.
YuvaBharataha Latest Kannada News