Breaking News

2023 ಸಾಲಿಗೆ ಇಗ್ನೋ ಪ್ರವೇಶ ಪ್ರಾರಂಭ

Spread the love

2023 ಸಾಲಿಗೆ ಇಗ್ನೋ ಪ್ರವೇಶ ಪ್ರಾರಂಭ

ಯುವ ಭಾರತ ಸುದ್ದಿ ಬೆಳಗಾವಿ :
ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ( ಇಗ್ನೋ ) ದೂರ ಶಿಕ್ಷಣದ ವಿವಿಧ ಕೋರ್ಸ್ ಗಳಿಗೆ 2023 ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಇಗ್ನೋ ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಒಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ.

ಇತ್ತೀಚಿಗೆ ಬೆಂಗಳೂರಿನ ನ್ಯಾಕ್ ಸಂಸ್ಥೆಯಿಂದ A ++ ಮಾನಂಕನವನ್ನು ಪಡೆದಿದೆ. ಆಸಕ್ತಿಯುಳ್ಳವರು ಬೆಳಗಾವಿಯ ಆರ್.ಪಿ.ಡಿ. ಮಹಾವಿದ್ಯಾಲಯಲ್ಲಿ ಸ್ಥಿತ ಇಗ್ನೋ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಲು ಕೇಂದ್ರದ ಸಂಯೋಜಕ ಪ್ರಾ . ಪ್ರಸನ್ನ ಜೋಶಿಯವರು ತಿಳಿಸಿದ್ದಾರೆ. ಅಧ್ಯಯನ ಕೆಂದ್ರದಲ್ಲಿ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಜೊತೆಗೆ , ಎಮ್.ಕಾಮ್ , ಎಮ್.ಬಿ.ಎ , ಎಮ್.ಸಿ.ಎ. ಬಿ.ಸಿ.ಎ. ಎಮ್.ಎ ಹೀಗೆ ಸುಮಾರು ಹಾಗು ಸರ್ಟಿಫಿಕೇಟ್ ವಿವಿಧ ಸ್ನಾತಕ , ಸ್ನಾತಕೋತ್ತರ , ಡಿಪ್ಲೋಮಾ ಕೋರ್ಸಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಎಲ್ಲಾ ಕೋರ್ಸುಗಳು ಅತ್ಯಂತ ರಿಯಾಯತಿ ಹಾಗೂ ಅಗ್ಗ ದರದಲ್ಲಿ ಉಪಲಬ್ಧವಾಗಿವೆ . ಅನೇಕ ಕೋರ್ಸುಗಳು ಪರಿಶಿಷ್ಟ ಜಾತಿ ಹಾಗು ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿವೆ . ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0831-2485997 / 9880392021 / 9449692186 ಗೆ ಸಂಪರ್ಕಿಸಬಹುದು ಅಥವಾ ಕಚೇರಿ ವೇಳೆಯಲ್ಲಿ ಸಂಜೆ 5.00 ರಿಂದ 8.00 ಘಂಟೆ ವರೆಗೆ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 + 19 =