ಪಂತ ಬಾಳೇಕುಂದ್ರಿಯಲ್ಲಿ ಗುಲಾಬಿ ಅಧ್ಯಕ್ಷೆ, ಜಮಾದಾರ ಉಪಾಧ್ಯಕ್ಷೆ ಅವಿರೋಧ ಆಯ್ಕೆ

ಬೆಳಗಾವಿ: ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ಗುರುವಾರ ನಡೆಯಿತು.
ಅಧ್ಯಕ್ಷರಾಗಿ ಗುಲಾಬಿ ಕೋಲಕಾರ, ಉಪಾಧ್ಯಕ್ಷರಾಗಿ ಬೀಬಿಹನೀಫಾ ಜಮಾದಾರ ಆಯ್ಕೆಯಾದರು. ಗೆಲುವು ಸಾಧಿಧಿಸುತ್ತಿದ್ದಂತೆ ಗಲಾಲು ಎರಚಿ ಸಂಭ್ರಮಿಸಿದರು.
ಚುನಾವಣಾ ಅಧಿಕಾರಿಯಾಗಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಆನಂದ ಪಾಟೀಲ ಕಾರ್ಯನಿರ್ವಹಿಸಿದರು.
ಗ್ರಾಪಂ ಸದಸ್ಯರಾದ ಅಬೆದಾಬೇಗಂ ಸನದಿ, ಭಾಗ್ಯಶ್ರೀ ಹಣಬರ, ಮೈನುದ್ದಿನ್ ಅಗಸಿಮನಿ, ಇಸ್ಮಾಯಿಲ್ ಮಕಾನದಾರ, ಗುಡುಮಾ ಮೋಮಿನ್, ಮಲೀಕ್ ಮನಿಯಾರ, ಮಹ್ಮದ್ ಜಮಾದಾರ, ಶಿವಲಿಂಗಯ್ಯ ಹಿರೇಮಠ, ಪಾರ್ವತಿ ತಳವಾರ, ಅಡಿವೇಶ ಅಂಗಡಿ, ವೀಣಾ ಪಾಟೀಲ, ಮುಖಂಡ ಪ್ರೇಮ ಕೋಲಕಾರ ಇತರರು ಇದ್ದರು.
YuvaBharataha Latest Kannada News