ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಹೊಡೆದಾಟ

ಬೆಳಗಾವಿ :
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಆಗಾಗ ಕೈದಿಗಳ ನಡುವೆ ಹೊಡೆದಾಟ ನಡೆಯುತ್ತಿರುವುದು ಹೊಸದೇನಲ್ಲ. ಇದೀಗ ಮತ್ತೆ ಹಿಂಡಲಗಾ ಕಾರಾಗ್ರಹದಲ್ಲಿ ಮತ್ತೆ ಕೈದಿಗಳಿಬ್ಬರ ನಡುವೆ ಹೊಡೆದಾಟ ನಡೆದಿರುವುದು ಬೆಳಕಿಗೆ ಬಂದಿದೆ.
ಕಾರಾಗೃಹದಲ್ಲಿ ಕೈದಿಗಳಿಬ್ಬರು ವೈಯಕ್ತಿಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದು ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ ಮೂಲದ ಸಾಯಿ ಕುಮಾರ್ ಗೆ ಗಂಭೀರ ಗಾಯಗಳಾಗಿವೆ. ಇನ್ನೊಬ್ಬ ಕೈದಿ ಶಂಕರ ಭಜಂತ್ರಿ ಸಹ ಗಾಯಗೊಂಡಿದ್ದು ಇಬ್ಬರೂ ಒಳರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಸಾಯಿ ಕುಮಾರ್ ಹಾಗೂ ಶಂಕರ್ ನಡುವೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದಿದೆ. ಸಾಯಿ ಕುಮಾರ್ ಗೆ ಶಂಕರ್ ಬಲವಾಗಿ ಹೊಡೆದಿದ್ದಲ್ಲದೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದಾನೆ ಎನ್ನಲಾಗಿದೆ.
YuvaBharataha Latest Kannada News