ಲಿಂಗರಾಜ ಕಾಲೇಜಿನಲ್ಲಿ ವಿಶ್ವಮಹಿಳಾ ದಿನಾಚರಣೆ ಸಂಭ್ರಮ
ಯುವ ಭಾರತ ಸುದ್ದಿ ಬೆಳಗಾವಿ :
ಮಹಿಳೆಯರು ಜಾಗತಿಕವಾಗಿ ಅಗಾಧ ಸಾಧನೆಯನ್ನು ಮಾಡಿದ್ದಾರೆ. ಇಂದು ಅವರು ಸ್ವಾವಲಂಬಿಗಳಾಗಿ ಜೀವನವನ್ನು ನಡೆಸುವಂತರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕೆಂದು ರಾಣಿ ಚೆನ್ನಮ್ಮ ಬ್ಯಾಂಕ್ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಾಧನೆಯ ಶಿಖರವನ್ನು ಏರಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರಗತಿಗೆ ಸಮಾಜ ಕಂಕಣಬದ್ಧರಾಗಬೇಕು, ಹೆಣ್ಣು ಸಮಾಜದ ಕಣ್ಣು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಮಾತನಾಡಿ, ವಿಶ್ವದ ಮಹಿಳೆಯರ ಸಾಧನೆಯು ಎಲ್ಲ ಮಹಿಳಾ ಸಮಾಜಕ್ಕೆ ಸ್ಫೂರ್ತಿದಾಯಕವಾಗಿದೆ. ಲಿಂಗ ಸಮಾನತೆ ಮಾತ್ರ ಸಮಾಜವನ್ನು ಹಾಗೂ ರಾಷ್ಟ್ರವನ್ನು ಬಲಪಡಿಸಲು ಸಾಧ್ಯ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತೆ ಆಗಬೇಕೆಂದು ಕರೆ ನೀಡಿದರು.
ಆಶಾ ಪ್ರಭಾಕರ ಕೋರೆಯವರನ್ನು ಕಾಲೇಜಿನ ಮಹಿಳಾ ಘಟಕ ವತಿಯಿಂದ ಸತ್ಕರಿಸಲಾಯಿತು. ಘಟಕದ ಅಧ್ಯಕ್ಷತೆ ಸಾರಿಕಾ ನಗರೆ, ಉಪಾಧ್ಯಕ್ಷೆ ನಂದಿನಿ ಎನ್. ಪಾರ್ವತಿ ರಾಜಶೇಖರ, ಆರ್.ಎಲ್.ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಕವಳೆಕರ ಉಪಸ್ಥಿತರಿದ್ದರು. ಪ್ರೊ. ಲಕ್ಷ್ಮೀ ಶಿವಣ್ಣವರ, ಪ್ರೊ.ಸವಿತಾ ಪಟ್ಟಣಶೆಟ್ಟಿ, ಡಾ.ಉಮಾ ಹಿರೇಮಠ, ಪಪೂ ಪ್ರಾ. ಗಿರಿಜಾ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು. ಸೌಮ್ಯಾ ಹಟ್ಟಿ ನಿರೂಪಿಸಿದರು. ವಿದ್ಯಾ ಹುಂಬಿ ವಂದಿಸಿದರು. ಮನಾಲಿ ದೇಸಾಯಿ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಶಾ ಕೋರೆ ಪ್ರಶಸ್ತಿಗಳನ್ನು ವಿತರಿಸಿದರು.