ಇಟಗಿ : ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ
ಯುವ ಭಾರತ ಸುದ್ದಿ ಇಟಗಿ :
ಮನುಷ್ಯ ಜನ್ಮ ಶ್ರೇಷ್ಠವಾಗಿದ್ದರಿಂದ ಸನ್ಮಾರ್ಗ, ಸತ್ಕಾರ್ಯ, ಉತ್ತಮ ಸಂಸ್ಕಾರಗಳನ್ನು ಮರೆಯಬಾರದೆಂದು ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮಿಮಠಾಧೀಶ ಶ್ರೀ ಡಾ. ಪಾಲಾಕ್ಷ ಶಿವಯೋಗೀಶ್ವರರು ಹೇಳಿದರು.
ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಚಿಂತನಾ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು. ಎಲ್ಲ ದೇಶಗಳಿಗಿಂತ ಭಾರತ ಧರ್ಮದಿಂದ ಶ್ರೇಷ್ಠವಾಗಿದೆ. ನಾವು ಧರ್ಮವನ್ನು ಕಾಪಾಡಿದರೆ, ಅದು ನಮ್ಮನ್ನ ಕಾಪಾಡುತ್ತದೆ. ನಮ್ಮ ಸಾಧಾರಣ ಬದುಕಿಗೆ ಬೆಲೆಯಿಲ್ಲ. ಎಲ್ಲ ಜೀವಿಗಳಿಗಿಂತ ಮನುಷ್ಯ ಶ್ರೇಷ್ಠವಾಗಿದ್ದಾನೆ. ಮಕ್ಕಳು ಒಳ್ಳೆ ಭವಿಷ್ಯ ಕಂಡುಕೊಳ್ಳಬೇಕಾದರೆ, ಉತ್ತಮ ಸಂಸ್ಕಾರವಂತರಾಗಬೇಕು. ಭಾರತೀಯ ಸನಾತನ ಸಂಸ್ಕೃತಿ ಶ್ರೇಷ್ಠವಾಗಿದೆ ಎಂದರು.
ದತ್ತವಾಡದ ಶ್ರೀ ಬಾಬಾಮಹಾರಾಜ ಆಶ್ರಮದ ಶ್ರೀ ಹೃಷಿಕೇಶಾನಂದ ಮಹಾರಾಜರು ಮಾತನಾಡಿ, ಮನುಷ್ಯ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಬೆಳೆಯಬೇಕಾಗಿದೆ. ಯಾವುದೇ ಧರ್ಮವಿರಲ್ಲಿ ಅದರಲ್ಲಿಯ ಒಳ್ಳೆಯ ಸಂಸ್ಕಾರ ಮತ್ತು ಗುಣಗಳನ್ನು ಪಡೆಯಬೇಕು. ಯುವಕರು ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗಬೇಕು. ಯುವಕರು ಗುರುಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಧರ್ಮಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.
ಅದೃಶ್ಯ ಸೋನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವಿ.ವಿ.ಬಡಿಗೇರ, ದಶರಥ ಬನೋಶಿ, ಬಿಷ್ಠಪ್ಪ ಬನೋಶಿ, ವಿಠ್ಠಲ ಹಿಂಡಲ್ಕರ, ಸುರೇಶ ಕರಡಿ, ಉದಯ ರೇಳೆಕರ, ರವಿಗೌಡಾ ಪಾಟೀಲ, ಮಹಾರುದ್ರಯ್ಯ ಹಿರೇಮಠ, ಜ್ಯೋತಿಬಾ ಭರಮಪ್ಪನವರ, ಈರಣ್ಣ ಲಂಗೋಟಿ, ಭರತೇಶ ಗಾಳಿ, ಕಲ್ಲಪ್ಪ ನರಿ, ಕಲ್ಲಪ್ಪ ಸುಭಾಣಿ, ಸುರೇಶ ಕುರಬರ ಹಾಗೂ ಇತರರು ಉಪಸ್ಥಿತರಿದ್ದರು.
ಈರಣ್ಣ ಕಾದ್ರೊಳ್ಳಿ ನಿರೂಪಿಸಿ, ವಂದಿಸಿದರು.