ಕೈ ಬಜೆಟ್ : ಝಿರಲಿ ಕಟು ಟೀಕೆ

ಬೆಳಗಾವಿ :
ಜನಸಾಮಾನ್ಯರ ತೆರಿಗೆ ಹಣವನ್ನು ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ನೀಡಿರುವ ಬಿಟ್ಟಿ ಭಾಗ್ಯಗಳಿಗೆ ಬಜೆಟ್ ಮೂಲಕ ಹಣ ಹಂಚಿಕೆ ಮಾಡಿರುವುದು ರಾಜ್ಯದ ಆರ್ಥಿಕ ದಿವಾಳಿತನ ಎಂದು ರಾಜ್ಯ ಬಿಜೆಪಿ ವಕ್ತಾರ ಎಮ್.ಬಿ.ಝೀರಲಿ ರಾಜ್ಯ ಬಜೆಟ್ ಬಗ್ಗೆ ತಿವ್ರ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಪ್ರಕಟಣೆ ಮೂಲಕ ತಿಳಿಸಿದ ಅವರು, ಬಂಡವಾಳ ಹೂಡಿಕೆಯಿಲ್ಲದ, ದೂರ ದೃಷ್ಟಿಯಿಲ್ಲದ ರಾಜ್ಯವನ್ನು ಬರುವ ದಿನಗಳಲ್ಲಿ ಆರ್ಥಿಕ ದಿವಾಳಿತನದತ್ತ ಕೊಂಡಯ್ಯುವ ಬಜೆಟ್ ಮಂಡಿಸಿರುವ ರಾಜ್ಯದ ಮುಖ್ಯಮಂತ್ರಿಗಳು ಎಪಿಎಂಸಿ ಕಾಯ್ದೆ, ಎನ್.ಈ.ಪಿ, ಗೋ ಶಾಲೆ, ಕೃಷಿ ಭೂಮಿ ಮಾರಾಟ ಕಾಯ್ದೆ, ವಿವೇಕಾನಂದ ಯುವ ಶಕ್ತಿ ಯೋಜನೆ, ಮಹಿಳಾ ಸ್ವಸಹಾಯ ಸಂಘದ ಸಹಾಯ ಧನ, ಅಗ್ನಿ ವೀರ ತರಬೇತಿ ಯೋಜನೆ, ಭೂ ಸಿರಿ ಯೋಜನೆಯಂತ ಹತ್ತು ಹಲವಾರು ಯೋಜನೆಗಳನ್ನು ರದ್ದು ಪಡಿಸುವ ಮೂಲಕ ಅಭಿವೃದ್ಧಿಗೆ ಕಲ್ಲು ಮಣ್ಣು ಹಾಕಿದ ಕೀರ್ತಿ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ ಎಂದು ಬಜೆಟ್ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
YuvaBharataha Latest Kannada News