Breaking News

ಕಳಸಾ ಬಂಡೂರಿ : ಕಾಂಗ್ರೆಸ್ ನಿಲುವಿಗೆ ಈರಣ್ಣ ಕಡಾಡಿ ತೀವ್ರ ಆಕ್ಷೇಪ

Spread the love

ಕಳಸಾ ಬಂಡೂರಿ : ಕಾಂಗ್ರೆಸ್ ನಿಲುವಿಗೆ ಈರಣ್ಣ ಕಡಾಡಿ ತೀವ್ರ ಆಕ್ಷೇಪ

ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು :
ಉತ್ತರ ಕರ್ನಾಟಕ ರೈತರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿಗೆ ತಾರ್ಕಿಕ ಅಂತ್ಯ ದೊರೆತಿದೆ, ಇದನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ರೈತರ ಉನ್ನತಿಗೆ ಸಹಕರಿಸಬೇಕೆ ಹೊರತು ವಿರೋಧಿಸುವ ಮೂಲಕ ರೈತಾಪಿ ವರ್ಗಕ್ಕೆ ಮುಳ್ಳಾಗಬಾರದೆಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು, ಡಿ.29 ರಂದು ಕೇಂದ್ರ ಬಿಜೆಪಿ ಸರ್ಕಾರ ಕಳಸಾ ಬಂಡೂರಿಯ ವಿಸ್ತೃತ ಯೋಜನೆ ರೂಪಿಸಲು ಅನುಮತಿ ಪತ್ರ ನೀಡಿರುವುದು ಸಂತಸ ಹಾಗೂ ಇದನ್ನು ಸ್ವಾಗತಿಸುತ್ತೇವೆ, ಇದರಿಂದ ಉತ್ತರ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ ಅಲ್ಲದೆ ಹೋರಾಟಗಳಿಗೂ ಜಯ ದೊರೆತಂತಾಗಿದೆ ಎಂದು ಹೇಳಿದ ಅವರು, ಯೋಜನೆಯ ಕುರಿತು ಅನುಮತಿ ನೀಡಿದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಸೋಮವಾರ ಈ ವಿಷಯದ ಕುರಿತು ಕಾಂಗ್ರೆಸ್ ಕೆಲವು ಪತ್ರಿಕೆಗಳಲ್ಲಿ ಪ್ರಶ್ನೆ ಹಾಕಿದೆ ಇದಕ್ಕೆ ಉತ್ತರಿಸಲು ನಾನು ಸಿದ್ದ, 2004 ರಿಂದ 2014 ರವರೆಗೂ ಕಾಂಗ್ರೆಸ್ ಸರ್ಕಾರ ಇದ್ದರೂ ಯಾವುದೇ ಈ ಕುರಿತು ಯಾವುದೆ ಕ್ರಮ ಕೈಗೊಳ್ಳಲಿಲ್ಲ, ಅಲ್ಲದೆ ರಾಜ್ಯದಲ್ಲಿ 2018 ರವರೆಗೂ ಕಾಂಗ್ರೆಸ್ ಆಡಳಿತದಲ್ಲಿ ಕಳಸಾ ಬಂಡೂರಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಯಿತು ಅದು ಸಾಧ್ಯವಾಗದೆ ಇದ್ದಾಗ ರೈತರ ಮೇಲೆ ಗಧಾ ಪ್ರಹಾರ ನಡೆಸಲಾಯಿತು. ಮಹಿಳೆಯರೆಂದು ಲೆಕ್ಕಿಸದೆ ದೌರ್ಜನ್ಯ ನಡೆಸಲಾಗಿದೆ, ಎಂದು ಹೇಳಿದ ಅವರು, ಕೇವಲ ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಹೊರಾಟ ನಡೆಸುವುದು ಸರಿಯಲ್ಲ, ಇದನ್ನೆ ಕಾಂಗ್ರೆಸ ಮುಂದುವರಿಸಿದಲ್ಲಿ ನಾಳೆಯ ದಿನ ನಗೆ ಪಾಟಲಿಗೆ ಒಳಗಾದರೂ ಯಾವುದೇ ಅಚ್ಚರಿ ಇಲ್ಲವೆಂದು ಎಚ್ಚರಿಸಿದರು.

ಮಹದಾಯಿಗೆ ಬೆಳಗಾವಿಯ 5 ವಿಧಾನಸಭಾ ಕ್ಷೇತ್ರಗಳು ಸೇರುತ್ತೇವೆ ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದಲ್ಲಿ ಸಭೆ ನಡೆಸಲಾಗುವುದು ಎಂದ ಅವರು, ದಿ. 4 ರಂದು 11 ಕ್ಕೆ ಖಾನಾಪೂರದ ಪಾರಿಶ್ವಾಡದಲ್ಲಿ ಅದೇ ದಿನ ಮಧ್ಯಾಹ್ನ 3 ಕ್ಕೆ ಬೈಲಹೊಂಗಲದಲ್ಲಿ ಸಭೆ ನಡೆಸಲಾಗುವುದು, ದಿ. 05 ರಂದು 11 ಕ್ಕೆ ಸವದತ್ತಿಯಲ್ಲಿ ಮದ್ಯಾಹ್ನ 3 ಕ್ಕೆ ರಾಮದುರ್ಗದಲ್ಲಿ ಅಲ್ಲದೆ ದಿ. 6 ರಂದು ಕಿತ್ತೂರಿನ ದಾಸ್ತಿಕೊಪ್ಪ ಗ್ರಾಮದಲ್ಲೂ ಸಭೆ ಆಯೋಜಿಸಲಾಗಿದ್ದು ಈ ನಿರ್ಧಾರ ಕೈಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸುವ ಅಭಿನಂದನಾ ಸಭೆಗೆ ಎಲ್ಲರೂ ಆಗಮಿಸುವಂತೆ ಆಹ್ವಾನ ನೀಡಿದರು‌.

ಬಾಕ್ಸ ಐಟಂ :
ಶಾಲೆಯಿಂದ ಮನೆಗೆ ತೆರಳುವ ವೇಳೆ ವಾಹಮ ಡಿಕ್ಕಿ ಹೊಡೆದು ಮೃತ ಪಟ್ಟ ಅಕ್ಷತಾ ಕುಟುಂಬಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡರ ಸಾಂತ್ವನ ಹೇಳಿದರು.

ಶಿವನೂರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ತೊಂದರೆ ಆಲಿಸಿ ಅವುಗಳಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದ ಶಾಸಕ ದೊಡ್ಡಗೌಡರ ಕಿತ್ತೂರು ಬಸ್ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 2 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಅಲ್ಲದೆ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. 2 ಲಕ್ಷ ಪರಿಹಾರ ಧನ ವಿತರಿಸಿದರು, ಅಲ್ಲದೆ ಮುಖ್ಯಮಂತ್ರಿಗಳ ಗಮನ ಸೇಳೆದು ರಾಜ್ಯ ಸರ್ಕಾರದಿಂದಲೂ ಪರಿಹಾರ ದೊರಕಿಸುವಂತೆ ಶ್ರಮಿಸಲಾಗುವುದು ಎಂದು ಹೇಳಿದ ಅವರು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಎಲ್ಲರಿಗೂ ಅಕ್ಷತಾ ಕುಟುಂಬ ವರ್ಗದ ಪರವಾಗಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ, ಸರಸ್ವತಿ ಹೈಬತ್ತಿ, ಈರಣ್ಣಾ ವಾರದ, ಬಸವರಾಜ ಮಾತನವರ ಸೇರಿದಂತೆ ಇತರರು ಇದ್ದರು‌.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

4 + twenty =